ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ ಬಸ್ಸು ನಿಲ್ದಾಣಕ್ಕೆ ಬಂದ ಪ್ರಯಾಣಿಕರ ಪರಿಸ್ಥಿತಿ ಅಯೋಮಯವಾಗಿರುತ್ತದೆ. ಇದಕ್ಕೆ ಇಂದಿನ ತಾಜಾ ಉದಾಹರಣೆ ನಿಮ್ಮ ಕಣ್ಣಿಗೆ ಸಮರ್ಪಕ ಕಾಣಲಿದೆ. ತಂಗುದಾಣದಲ್ಲಿ ಕುಳಿತು ಬಸ್ಸಿಗಾಗಿ ನಿರೀಕ್ಷಿಸುವ ಪ್ರಯಾಣಿಕರು ಎಲ್ಲೋ ದೂರದಲ್ಲಿ ನಿಂತ ಬಸ್ಸಿಗೆ ಓಡಿಕೊಂಡು ತೆರಳುವ, ತೆವಳುವ ಅನಿವಾರ್ಯತೆ. ಇಂತಹ ಅನಿವಾರ್ಯತೆಗೆ ಕಾರಣ ನಾರಾವಿ, ಶಿರ್ತಾಡಿ ಕಡೆಗೆ ತೆರಳುವ ಬಸ್ಸುಗಳು ನಿಲ್ಲುವ ಸ್ಥಳವನ್ನು ಆಕ್ರಮಿಸಿರುವ ಖಾಸಗಿ ವಾಹನಗಳು.
ಇರುವೈಲು, ಬಿ ಸಿ ರೋಡು ಕಡೆಗೆ ತೆರಳುವ ಬಸ್ಸುಗಳ ಸ್ಥಳವನ್ನು ಆಕ್ರಮಿಸಿರುವ ಖಾಸಗಿ ವಾಹನಗಳು,
ಅಲಂಗಾರು, ಕಾರ್ಕಳ ಪ್ರದೇಶಕ್ಕೆ ತೆರಳುವ ಬಸ್ಸುಗಳು ನಿಲ್ಲುವ ಸ್ಥಳವನ್ನು ಆಕ್ರಮಿಸಿರುವ ಖಾಸಗಿ ವಾಹನಗಳು,
ಒಟ್ಟಾರೆ ಬಸ್ಸು ನಿಲ್ದಾಣದಲ್ಲಿ ಬಸ್ಸುಗಳು ನಿಲ್ಲುವ ಸ್ಥಳವೆಲ್ಲವನ್ನು ಆಕ್ರಮಿಸಿರುವ ಖಾಸಗಿ ವಾಹನಗಳಿಂದಾಗಿ ಬಸ್ಸುಗಳು ಎಲ್ಲೆಲ್ಲೋ ನಿಂತು ಹೋಗುವ, ಪ್ರಯಾಣಿಕರು ಬಸ್ಸಿಗಾಗಿ ಓಡಿಕೊಂಡು, ತೆವಳಿಕೊಂಡು ನಲಿದಾಡುವ ಪರಿಸ್ಥಿತಿ ಮೂಡುಬಿದಿರೆಗೆ ಆಗಮಿಸಿ ತೆರಳುವ ಪ್ರಯಾಣಿಕರದ್ದಾಗಿರುವುದು, ಪಾಪ ಫ್ಯಾನ್ ಅಡಿಯಲ್ಲಿ ತಂಪಾಗಿ ಕುಳಿತಿರುವ ಪುರಸಭೆಯ ಅಧಿಕಾರಿಗಳಿಗಾಗಲಿ, ಜನಪ್ರತಿನಿಧಿಗಳಿಗಾಗಲಿ ತಿಳಿಯದಿರುವುದು ಖೇದಕರ ಬೇಸರ.
ಈ ಫೋಟೋಗಳು ಇಂದಿನ ತಾಜಾ ಉದಾಹರಣೆಗಳಾಗಿವೆ.