ಮೂಡುಬಿದಿರೆ: ಕರ್ತವ್ಯಲೋಪ, ಲಂಚಕ್ಕೆ ಬೇಡಿಕೆ ಆರೋಪ; ಮೂವರು ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಸಚಿವರಿಗೆ ದೂರು

0
270

ಮೂಡುಬಿದಿರೆ: ಕಂದಾಯ ಇಲಾಖೆಯ ಭೂ ದಾಖಲೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಮೂವರ ಅಧಿಕಾರಿಗಳ ವಿರುದ್ಧ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಮೂಡುಬಿದಿರೆ ಬ್ಲಾಕ್‌ ಕಾಂಗ್ರೆಸ್‌ ವಕ್ತಾರ ರಾಜೇಶ್‌ ಕಡಲಕೆರೆ ಎಂಬವರು ದೂರು ನೀಡಿದ್ದಾರೆ.

ಭೂ ದಾಖಲೆ ಸಹಾಯಕ ನಿರ್ದೇಶಕರಾಗಿರುವ ರಾಜು ಬಿ.ಕೆ., ಸರ್ವೇ ಸುಪರ್‌ ವೈಸರ್‌ ಆಗಿ ಕಾರ್ಯನಿರ್ವಹಿಸುತ್ತಿರುವ ನಾಗೇಂದ್ರಪ್ಪ ಹಾಗೂ ಸರ್ವೇಯರ್‌ ಹಾಗೂ ಕೇಸ್‌ ವರ್ಕರ್‌ ಆಗಿ ಕೆಲಸ ಮಾಡುತ್ತಿರುವ ಸಂತೋಷ್‌ ಡಿ. ಎಂಬವರ ವಿರುದ್ಧ ದೂರು ನೀಡಲಾಗಿದೆ. ಇವರು ಕಡತಗಳನ್ನು ತ್ವರಿತವಾಗಿ ವಿಲೇ ಮಾಡದೆ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಇದರಿಂದ ಕಂದಾಯ ಇಲಾಖೆ ಹಾಗೂ ಸರಕಾರಕ್ಕೆ ಕೆಟ್ಟ ಹೆಸರು ಬರುವಂತಾಗಿದೆ. ರಾಜು ಬಿ.ಕೆ. ವಾರಕ್ಕೊಮ್ಮೆ ಮೂಡುಬಿದಿರೆ ಕಚೇರಿಗೆ ಆಗಮಿಸಿ ಸಣ್ಣ ಸಣ್ಣ ವಿಚಾರದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ನಾಗೇಂದ್ರಪ್ಪ ಹಾಗೂ ಸಂತೋಷ್‌ ಡಿ. .ಸುಮಾರು ಐದು ವರ್ಷಗಳಿಂದಲೂ ಮೂಡುಬಿದಿರೆಯಲ್ಲೇ ಕಾರ್ಯ ನಿರ್ವಹಿಸುತ್ತಿದ್ದು, ಜನಸಾಮಾನ್ಯರ ಜೊತೆ ಉದ್ದಟತನ ಹಾಗೂ ಉಡಾಫೆಯಾಗಿ ಮಾತನಾಡುತ್ತಾರೆ. ಈಗಾಗಿ ಮೂವರನ್ನೂ ಕೆಲಸದಿಂದ ಅಮಾನತುಗೊಳಿಸಿ ಅವರ ಮೊಬೈಲ್‌ ಸಂಖ್ಯೆಗಳನ್ನು ತನಿಖೆಗೊಳಪಡಿಸುವಂತೆ ಅವರು ಮನವಿ ಯಲ್ಲಿ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here