ಮೂಡುಬಿದಿರೆ: ಅಭಿವೃದ್ಧಿಯಲ್ಲಿ ತಮ್ಮದೇ ವಿಶಿಷ್ಠ ಕೊಡುಗೆಗಳ ಮೂಲಕ ಗುರುತಿಸಿಕೊಂಡಿರುವ ಸಾಧಕರ ಪೈಕಿ ವರ್ಷವೂ ದಸರಾ ಉತ್ಸವದಲ್ಲಿ 18 ಮಂದಿ ಸಾಧಕರನ್ನು ಸಮಾಜ ಮಂದಿರ ಪುರಸ್ಕಾರದೊಂದಿಗೆ ಗೌರವಿಸುತ್ತಾ ಬರಲಾಗುತ್ತಿದೆ.
ಐದು ದಿನಗಳ ಉತ್ಸವದ ಅವಧಿಯಲ್ಲಿ ಹಂತ ಹಂತವಾಗಿ ಸಾಧಕರನ್ನು ಗೌರವಿಸಲಾಗುವುದು ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ. ಸಮಾಜ ಮಂದಿರ ಗೌರವ 2025 ಕ್ಕೆ ಆಯ್ಕೆಯಾದವರ ವಿವರ ಈ ಕೆಳಗಿನಂತಿದೆ.
ವೇ. ಮೂ. ಶ್ರೀ ಎಂ. ಹರೀಶ್ ಭಟ್ (ಧಾರ್ಮಿಕ) ಆಡ್ಲಿನ್ ಜೆ. ಜತನ್ನ (ಶಿಕ್ಷಣ) ಗೌರಾ ಗೋವರ್ಧನ್ (ಶಿಕ್ಷಣ, ಸಾಹಿತ್ಯ), ಹರ್ಷವರ್ಧನ್ ಪಡಿವಾಳ್ (ಆಹಾರ ಉದ್ಯಮ) ಪಿ. ರಾಜಾರಾಮ ಭಟ್ (ಸಾಹಿತ್ಯ ಸೇವೆ) ಡಾ. ರೇವತಿ ಭಟ್ (ಆರೋಗ್ಯ) ರವಿ ಕೋಟ್ಯಾನ್ (ಛಾಯಾಗ್ರಹಣ) ಸೀತಾರಾಮ ಶೆಟ್ಟಿ ತೋಡಾರು (ವೇದಿಕೆ ವಿನ್ಯಾಸ) ಯಶವಂತ ಎಂ.ಜಿ. (ಸಂಗೀತ) ರಾಜೇಶ್ ಆರ್. ಶ್ಯಾನುಭಾಗ್ (ಛಾಯಾಗ್ರಹಣ) ತಿಲಕ್ ಕುಲಾಲ್ (ಚಿತ್ರ ಕಲೆ) ಅಶ್ರಫ್ ವಾಲ್ಪಾಡಿ (ಕಲೆ, ಪತ್ರಿಕೋದ್ಯಮ) , ಹೆರಾಲ್ಡ್ ತಾವ್ರೋ (ಸಂಗೀತ) ಪ್ರಕಾಶ್ ಅಮೀನ್ (ಯೋಗ ಸಂಸ್ಕೃತಿ) ದಾಮೋದರ ಡಿ.ಸಪಲಿಗ (ಸಮುದಾಯ ಸೇವೆ ) ದಿನೇಶ್ ಪೂಜಾರಿ (ಸಮುದಾಯ ಸೇವೆ) ರಾಜೇಶ್ ಒಂಟಿಕಟ್ಟೆ (ಕಲೆ) ಕಿರಣ್ ಕುಮಾರ್ (ಶಿಕ್ಷಣ).