ಮೂಡುಬಿದಿರೆ: ಆಟೋರಿಕ್ಷಾ ಮಾಲಕ ಚಾಲಕರ ಸಂಘದ ವತಿಯಿಂದ ಧನಲಕ್ಷ್ಮಿ ಪೂಜೆ ಹಾಗೂ ವಾಹನ ಪೂಜೆಯು ಮಂಗಳವಾರ ಸಂಜೆ ನಡೆಯಿತು.

ಈ ಸಂದರ್ಭದಲ್ಲಿ ನೋಟರಿಯಾಗಿ ನೇಮಕಗೊಂಡಿರುವ ನ್ಯಾಯವಾದಿ ಪ್ರವೀಣ್ ಲೋಬೋ, ಎಂ.ಸಿ.ಎಸ್.ಬ್ಯಾಂಕ್ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಹಾಗೂ ಪಂಚರತ್ನ ಇಂಟರ್ನ್ಯಾಷನಲ್ ನ ತಿಮ್ಮಯ್ಯ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಸಚಿವ ಕೆ.ಅಭಯಚಂದ್ರ, ಡಾ.ಎಂ.ಮೋಹನ ಆಳ್ವ,ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ ಎಂ,ಪುರಸಭಾ ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಶರತ್ ಡಿ.ಶೆಟ್ಟಿ, ಅಧ್ಯಕ್ಷ ದೀಪಕ್ ರಾಜ್ ಕೊಡಂಗಲ್ಲು,ಮಾಜಿ ಅಧ್ಯಕ್ಷರಾದ ಎಂ.ರಾಮಚಂದ್ರ, ಪ್ರದೀಪ್ ರೈ ಭಾಸ್ಕರ ಆಚಾರ್ಯ, ಪ್ರಶಾಂತ್ ಅಂಚನ್, ರಾಜೇಶ್ ಹೌದಾಲ್, ಧರಣೇಂದ್ರ ಜೈನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

