ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ದೊಡ್ಮನೆ ಫ್ರೆಂಡ್ಸ್ ರವರ ನೂತನ ಲಾಂಛನವನ್ನು ಗೌರಿ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.

ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಸುದರ್ಶನ್ ಎಮ್ ಅವರು ಲಾಂಛನವನ್ನು ಬಿಡುಗಡೆ ಮಾಡಿ ಉತ್ತಮ ಕೆಲಸವನ್ನು ಮಾಡುತ್ತಿರುವ ದೊಡ್ಮನೆ ಫ್ರೆಂಡ್ಸ್ ರವರ ಕಾರ್ಯವನ್ನು ಮೆಚ್ಚಿಕೊಂಡು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ದೇವಾಲಯದ ಅನುವಂಶಿಕ ಮೊಕ್ತೇಸರ ರಾಜೇಶ್ ಭಟ್, ಬೆದ್ರ ಫ್ರೆಂಡ್ಸ್ ನ ಪ್ರಕಾಶ್ ಕುಂದರ್, ಸುರೇಶ್ ಶೆಟ್ಟಿ , ಓಮಯ್ಯ ಹಾಗೂ ಬೆದ್ರ ಫ್ರೆಂಡ್ಸ್ ನ ಎಲ್ಲಾ ಸದಸ್ಯರು ಹಾಜರಿದ್ದರು.
