ಮೂಡುಬಿದಿರೆ : ಸಮಾಜ ಮಂದಿರದಲ್ಲಿ ಗ್ರಾಮೀಣ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ

0
272

ವರದಿ ರಾಯಿ ರಾಜ ಕುಮಾರ.
ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಡಿಸೆಂಬರ್ 20 ರಂದು ಗ್ರಾಮೀಣ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಮೇಳ ಸಮಾಜ ಮಂದಿರದಲ್ಲಿ ನಡೆಯಿತು. ಸ್ವ ಸಹಾಯ ಸಂಘಗಳ ಗ್ರಾಮೀಣ ಕುಶಲಕರ್ಮಿಗಳು ತಯಾರಿಸಿದ ಗ್ರಾಮೀಣ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಪ್ರದರ್ಶನವನ್ನು ಉದ್ಘಾಟಿಸಿದ ದ ಕ ಜಿಲ್ಲಾ ಪಂಚಾಯತ್ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್ ಮಾತನಾಡಿ ಸ್ಪರ್ಧೆ ಇದ್ದರೂ ಕೂಡ ಎಲ್ಲರೂ ಒಂದಾಗಿ ಸಹಕರಿಸಿ ಬೆಳೆದು ಅಭಿವೃದ್ಧಿ ಆಗುತ್ತಿರುವುದು ಸಂತಸಕರ ವಿಷಯ. ಟೆಸ್ಟ್ ಮತ್ತು ಟೆಸ್ಟ್ ಗಳಿಂದಾಗಿ ರಾಷ್ಟ್ರಮಟ್ಟದ ಮೇಳಗಳಲ್ಲಿ ಭಾಗವಹಿಸಲು ಗ್ರಾಮೀಣ ಸ್ವಸಹಾಯ ಸಂಘಗಳಿಗೆ ಅವಕಾಶಗಳು ದೊರಕುತ್ತಿವೆ ಮಹಿಳೆಯರು ಅಂತಹ ಎಲ್ಲ ಸಂದರ್ಭಗಳನ್ನು ಸದುಪಯೋಗಿಸಿಕೊಳ್ಳಬೇಕು ಎಂದು ಕರೆಕೊಟ್ಟರು.

ಇಪ್ಪತ್ತಕ್ಕೂ ಹೆಚ್ಚು ಸ್ವಸಹಾಯ ಸಂಘಗಳ ವಿವಿಧ ಉತ್ಪನ್ನಗಳು ಪ್ರದರ್ಶನದಲ್ಲಿ ಲಭ್ಯವಿದ್ದವು. ಈ ಸಂದರ್ಭದಲ್ಲಿ ಆದರ್ಶ ಸಂಸ್ಥೆಯ ಅಧ್ಯಕ್ಷ ಜೇಕಬ್ ವರ್ಗೀಸ್, ಸಂಚಾಲಕ ಗಣೇಶ ಬಾರ್ದಿಲ, ನಿರ್ದೇಶಕರುಗಳಾದ ರೂಬಿ ವರ್ಗೀಸ್, ಶೆರ್ಲಿ, ಶ್ರೀಲತಾ, ಜಯಶ್ರೀ ಹಾಗೂ ಇತರರು ಹಾಜರಿದ್ದರು .

LEAVE A REPLY

Please enter your comment!
Please enter your name here