ಮೂಡುಬಿದಿರೆ: ರಾಜ್ಯ ಕಂಬಳ ಅಸೋಸಿಯೇಷನ್ ನ ಕಾರ್ಯಕಾರಿ ಸಮಿತಿ ಸಭೆ

0
33

ಮೂಡುಬಿದಿರೆ: ರಾಜ್ಯ ಕಂಬಳ ಅಸೋಸಿಯೇಷನ್ ಪ್ರಥಮ ಸಭೆ ಮೂಡಬಿದ್ರೆಯ ಕಡಲಕೆರೆ ಸೃಷ್ಟಿ ಗಾರ್ಡನ್ ನಲ್ಲಿ ಸಮಿತಿಯ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಬೆಳಪು ಇವರ ಅಧ್ಯಕ್ಷೆಯಲ್ಲಿ ನಡೆಯಿತು. ರಾಜ್ಯ ಕಾರ್ಯಕಾರಿ ಸಮಿತಿಯ ಉಪಸ್ಥಿತಿಯಲ್ಲಿ ಮುಂದೆ ಕಂಬಳ ಆಯೋಜನೆ ಕಂಬಳಕ್ಕೆ ಸರ್ಕಾರದಿಂದ ಸಿಗುವ ಸವಲತ್ತು ಹಾಗೂ ಎಲ್ಲಾ ಕಂಬಳದ ವ್ಯವಸ್ಥಾಪಕರ ಮತ್ತು ಕಂಬಳದ ಯಜಮಾನರ ಸಭೆಯನ್ನು ಕರೆದು ಸಮಯ ಪಾಲನೆ ಬಗ್ಗೆ , ಕಾನೂನಿನ ಚೌಕಟ್ಟಿನ ಬಗ್ಗೆ ಮಾಹಿತಿ ನೀಡುವುದು ಮತ್ತು ಇತರ ಎಲ್ಲಾ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಸರ್ಕಾರಕ್ಕೆ ಕಂಬಳ ಸಮಿತಿಯ ಪರವಾಗಿ ಕಾರ್ಮಿಕ ಇಲಾಖೆ, ಪ್ರವಾಸೋಧ್ಯಮ ಇಲಾಖೆ, ಕನ್ನಡ ಸಾಂಸ್ಕೃತಿಕ ಇಲಾಖೆಯಿಂದ ವಿಶೇಷ ಸಹಕಾರ ನೀಡುವ ಬಗ್ಗೆ ಮನವಿ ಮಾಡಲಾಯಿತು. ಮುಂದೆ ಮಂಗಳೂರು ಪುರ ಭವನದಲ್ಲಿ ಪದಗ್ರಹಣ ಕಾರ್ಯಕ್ರಮವನ್ನು ಜರುಗಿಸುವುದು ಎಂದು ಮತ್ತು ಎಲ್ಲಾ ಕ್ರೀಡಾ ಪ್ರಾಧಿಕಾರದ ಆಯುಕ್ತರು ಹಾಗೂ ಸಚಿವರು ಮತ್ತು ಎಲ್ಲಾ ಶಾಸಕರರಿಗೆ ಅಭಿನಂದನ ಕಾರ್ಯಕ್ರಮ ನಡೆಸಲಾಗುವುದೆಂದು ತೀರ್ಮಾನಿಸಲಾಯಿತು.

LEAVE A REPLY

Please enter your comment!
Please enter your name here