ಮೂಡುಬಿದಿರೆಯಲ್ಲಿ ಸರಕಾರದ ಗ್ಯಾರಂಟಿ ಯೋಜನೆ ಅನುಷ್ಠಾನ, ಬಂಟರ ಸಂಘ, ಆಳ್ವಾಸ್ ಹೆಲ್ತ್ ಸೆಂಟರ್, ಆಳ್ವಾಸ್ ನಿರಾಮಯ ವಿದ್ಯಾಗಿರಿಯ ಜಂಟಿ ಸಹಭಾಗಿತ್ವದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಒಟ್ಟು ಸುಮಾರು 149 ಜನರ ಆರೋಗ್ಯ ತಪಾಸಣೆ ನಡೆಸಲಾಯಿತು. 96 ಮಂದಿ ಸಾಮಾನ್ಯ ಖಾಯಿಲೆಗಳಿಗೆ ತಪಾಸಿಸಲ್ಪಟ್ಟರು. 37 ಮಂದಿ ಪ್ರಸೂತಿ ಮತ್ತು ಸ್ತ್ರೀರೋಗ ಚಿಕಿತ್ಸಾ ತಪಾಸಣೆಗೆ, 6 ಮಂದಿ ಸಕ್ಕರೆ ಖಾಯಿಲೆಗೆ ತಪಾಸಿಸಲ್ಪಟ್ಟರು, 10 ಮಂದಿ ಅನಿಮಿಯಾಗೆ ಸಂಬಂಧಿಸಿದಂತೆ ಮಾಹಿತಿ ನೀಡಲಾಯಿತು ಎಂದು ಶಿಬಿರದ ಉಸ್ತುವಾರಿ ವಹಿಸಿರುವ ಡಾ. ಸುರೇಖಾ ಪೈ ಯವರು ಮಾಹಿತಿ ನೀಡಿದರು. ಒಟ್ಟು 20 ಮಂದಿ ಆಳ್ವಾಸ್ ಡಾಕ್ಟರ್ ತಂಡ ಡಾ. ಹನಾ ಶೆಟ್ಟಿ ನೇತೃತ್ವದಲ್ಲಿ ಕಾರ್ಯಕ್ರಮ ನಿರ್ವಹಿಸಿದರು.
ವರದಿ ರಾಯಿ ರಾಜಕುಮಾರ ಮೂಡುಬಿದಿರೆ