ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ಗಣೇಶೋತ್ಸವದ ಪ್ರಯುಕ್ತ ಆಗಸ್ಟ್ 23 ರಂದು ಪ್ರೌಢಶಾಲೆ, ಕಾಲೇಜು, ಸಾರ್ವಜನಿಕರಿಗೆ ಬೆಳಗ್ಗೆ ರಸಪ್ರಶ್ನೆ, ಮಧ್ಯಾಹ್ನ ರಂಗೋಲಿ ಸ್ಪರ್ಧೆ ಇದೆ. ಪ್ರಾಥಮಿಕ, ಪ್ರೌಢಶಾಲಾ, ಕಾಲೇಜು, ಸಾರ್ವಜನಿಕ ವಿಭಾಗಗಳಲ್ಲಿ 24 ರಂದು ಗುಂಪು ಭರತನಾಟ್ಯ, 25 ರಂದು ಗುಂಪು ಜಾನಪದ ನೃತ್ಯ, 26ರಂದು ಗುಂಪು ರಾಷ್ಟ್ರ ಪ್ರೇಮ ಸಾರುವ ನೃತ್ಯ ಸ್ಪರ್ಧೆಗಳು ನಡೆಯಲಿವೆ. 29 ರಂದು ನಡೆಯುವ ಹೂ ನೈಯುವ/ ಕಟ್ಟುವ ಸ್ಪರ್ಧೆ ಸಾರ್ವಜನಿಕರಿಗೆ ಮಾತ್ರ ಇದ್ದು, ಅಗತ್ಯದ ವಸ್ತುಗಳನ್ನು ಅವರೇ ತರಬೇಕು. ಎಲ್ಲಾ ಸ್ಪರ್ಧೆಗಳು ಮೂಡುಬಿದಿರೆ ಸಮಾಜ ಮಂದಿರದಲ್ಲಿ ಜರುಗಲಿದೆ. ಹೆಚ್ಚಿನ ಮಾಹಿತಿಗೆ 9448726977 ಸಂಪರ್ಕಿಸಿ.