ಕ್ರೀಡೆಯಿಂದ ದೈಹಿಕ ಸಾಮರ್ಥ್ಯ ವೃದ್ಧಿಯಾಗುವುದರ ಜತೆಗೆ ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯವನ್ನು ಬೆಳೆಸುತ್ತದೆ ಎಂದು ಕ್ಯಾಂಪ್ಕೊ ನಿರ್ದೇಶಕರಾದ ಕುಕ್ಕುಜೆ ದಯಾನಂದ ಹೆಗ್ಡೆ ಹೇಳಿದರು.
ಇಲ್ಲಿನ ಬೆಟ್ಗೇರಿಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಹೆಗ್ಗಡೆ ಸಮಾಜ ಸಂಘ ಕೋಟೆಬಾಗಿಲು ವತಿಯಿಂದ ಹೆಗ್ಗಡೆ ಸಮಾಜ ಬಾಂಧವರ ವಾರ್ಷಿಕ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಉತ್ತರ ಪ್ರದೇಶದ ಅರುಣಿಮಾ ಸಿನ್ಹಾ ಎಂಬ ಮಹಿಳೆ ತನ್ನ ಒಂದು ಕಾಲು ಕಳಕೊಂಡರು ಕೃತಕ ಕಾಲಿನ ಸಹಾಯದಿಂದ ಹಿಮಾಲಯದ ಮೌಂಟ್ ಎವರೆಸ್ಟ್ ಏರಿದ ವಿಶ್ವದ ಮೊದಲ ವಿಕಲಚೇತನ ಮಹಿಳೆ ಎಂಬ ಹೆಗ್ಗಳಿಕೆ ಪಡಕೊಂಡರು. ಅವರಲ್ಲಿದ್ದ ಛಲ ಮತ್ತು ಪರಿಶ್ರಮ ಈ ಸಾಧನೆ ಮಾಡಲು ಸಾಧ್ಯವಾಯಿತು. ಇಂತಹ ಕಠಿಣ ಪರಿಶ್ರಮ ಹಾಗೂ ಇಚ್ಚಾಶಕ್ತಿ ಕ್ರೀಡಾಪಟುಗಳಲ್ಲಿ ಅತೀ ಅಗತ್ಯ ಎಂದರು.
ಇದಕ್ಕು ಮೊದಲು ಕ್ರೀಡಾಕೂಟವನ್ನು ಉದ್ಘಾಟಿಸಿದ ನಿವೃತ್ತ ಕಬಡ್ಡಿ ಆಟಗಾರ ಮೋಹನದಾಸ್ ಹೆಗ್ಡೆ ವೇಣೂರು `ವಿದ್ಯಾರ್ಥಿಗಳು ಕಲಿಕೆಯ ಜತೆಗೆ ಕ್ರೀಡೆಯಲ್ಲು ಹೆಚ್ಚು ತೊಡಗಿಸಿಕೊಂಡಾಗ ಉತ್ತಮ ಬದುಕು ರೂಪಿಸಲು ಸಾಧ್ಯ. ಇಂತಹ ಸಾಧನೆಯನ್ನು ನಾನು ನನ್ನ ಬದುಕಿನಲ್ಲಿ ಸಾಧಿಸಿದ್ದೇನೆ’ ಎಂದರು.
ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಅಧ್ಯಕ್ಷ ಹಟ್ಟಾಜೆಗುತ್ತು ಪ್ರಭಾಕರ ಹೆಗ್ಡೆ ಅಧ್ಯಕ್ಷತೆ ವಹಿಸಿದರು. ಅರುಣ ಹೆಗ್ಡೆ ಗಡಿಕಾರರು ಬಳಂಜ ಇವರು ಕ್ರೀಡಾಜ್ಯೋತಿ ಪ್ರಜ್ವಲನೆ ಮಾಡಿದರು. ಕೋಟೆಬಾಗಿಲು ವೀರಮಾರುತಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಶ್ಯಾಮ ಹೆಗ್ಡೆ, ನಿವೃತ್ತ ಅಬಕಾರಿ ಅಧೀಕ್ಷಕರಾದ ಸದಾಶಿವ ಹೆಗ್ಡೆ, ನಾರಾವಿ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಜಗದೀಶ್ ಹೆಗ್ಡೆ, ಶಿವಾನಂದ ಹೆಗ್ಡೆ ಆಳದಂಗಡಿ, ಅಶೋಕ್ ಕುಮಾರ್ ಹೆಗ್ಡೆ ಕಡ್ತಲ, ರೋಷನ್ ಹೆಗ್ಡೆ ನಾರಾವಿ, ಉದ್ಯಮಿ ಅಂಕುಶ್ ಹೆಗ್ಡೆ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ಹೆಗ್ಡೆ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಶೋಕ್ ಹೆಗ್ಡೆ ಉಪಸ್ಥಿತರಿದ್ದರು.
ಸುಂದರ ಹೆಗ್ಡೆ ವೇಣೂರು ನಿರೂಪಿಸಿದರು, ಶುಭರಾಜ ಹೆಗ್ಡೆ ವಂದಿಸಿದರು.


