ಮೂಡುಬಿದಿರೆ: ಹಿಂದೂ ಯುವತಿಗೆ ಅನ್ಯಕೋಮಿನ ವ್ಯಕ್ತಿಯಿಂದ ಹಲ್ಲೆ

0
1


ಮೂಡುಬಿದಿರೆ: ಇಲ್ಲಿನ ಕೋಟೆಬಾಗಿಲು ಪ್ರದೇಶದಲ್ಲಿ ಅನ್ಯಕೋಮಿನ ಯುವಕನೊಬ್ಬ ಹಿಂದೂ ಯುವತಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಹಲ್ಲೆಗೊಳಗಾದ ಯುವತಿಯನ್ನು ಪಡುಕೊಣಾಜೆ ಗ್ರಾಮದ ಪವಿತ್ರಾ (28) ಎಂದು ಗುರುತಿಸಲಾಗಿದ್ದು, ಕೋಟೆಬಾಗಿಲಿನ ಆಸಿಫ್ ಎಂಬಾತ ಆರೋಪಿ ಎನ್ನಲಾಗಿದೆ. ಯುವತಿ ಕೋಟೆ ಬಾಗಿಲಿನ ಮಾರಿಗುಡಿ ಬಳಿ ಮನೆ ನಿರ್ಮಿಸುತ್ತಿದ್ದು, 4 ಕೆಂಪುಕಲ್ಲುಗಳು ಇಲ್ಲದಿರುವ ಬಗ್ಗೆ ಸಂತ್ರಸ್ತೆ ಆರೋಪಿಯ ತಾಯಿಯ ಬಳಿ ವಿಚಾರಿಸುತ್ತಿದ್ದರು ಎನ್ನಲಾಗಿದೆ.
ಆ ಸಂದರ್ಭದಲ್ಲಿ ಏಕಾಏಕಿ ಬಂದ ಆರೋಪಿ ಆಸಿಫ್ ಯುವತಿಗೆ ಬೈದು ಕೈಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಯುವತಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆನ್ನಲಾಗಿದೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಘಟನೆಯನ್ನು ಹಿಂದೂ ಜಾಗರಣಾ ವೇದಿಕೆ ಖಂಡಿಸಿದೆ.

LEAVE A REPLY

Please enter your comment!
Please enter your name here