ಮೂಡುಬಿದಿರೆ ಹೋಬಳಿ ಮಟ್ಟದ ಶಾಲಾ ಕ್ರೀಡಾಕೂಟ

0
76

ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ ಕ್ಷೇತ್ರಶಿಕ್ಷಣಾಧಿಕಾರಿಯವರ ಕಚೇರಿ, ನೀರ್ಕೆರೆ ಸ.ಹಿ.ಪ್ರಾ.ಶಾಲೆ ಇವುಗಳ ಆಶ್ರಯದಲ್ಲಿ ಮೂಡುಬಿದಿರೆ ಹೋಬಳಿ ಮಟ್ಟದ ಪ್ರಾಥಮಿಕ
ಶಾಲಾ ಕ್ರೀಡಾಕೂಟ ಸ್ವರಾಜ್ಯ ಮೈದಾನ್ ನ ಕ್ರೀಡಾಂಗಣದಲ್ಲಿ ಅಕ್ಟೋಬರ್ 27ರಂದು ಜರಗಿತು.


ನೀರ್ಕೆರೆ ಎಸ್ ಡಿಎಂಸಿ ಅಧ್ಯಕ್ಷೆ ಜಯಲಕ್ಷೀ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಮೂಡುಬಿದಿರೆ ಪುರಸಭಾಧ್ಯಕ್ಷೆ ಜಯಶ್ರೀ ಕ್ರೀಡಾಕೂಟವನ್ನು
ಉದ್ಘಾಟಿಸಿದರು. ಮಕ್ಕಳ ದೈಹಿಕ ಮಾನಸಿಕ ದೃಢತೆಗೆ ಕ್ರೀಡಾ ಚಟುವಟಿಕೆಗಳು ಪೂರಕವಾಗಿವೆ. ಪೋಷಕರೂ ಶಿಕ್ಷಕರೂ ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸಬೇಕು ಎಂದು ಕರೆ ನೀಡಿದರು.
ತೆಂಕಮಿಜಾರು ಗ್ರಾ.ಪಂ ಅಧ್ಯಕ್ಷ ಶಾಲಿನಿ ಧ್ವಜಾರೋಹಣಗೈದರು. ಪುರಸಭಾ ಉಪಾಧ್ಯಕ್ಷ ನಾಗರಾಜ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ನಿರೂಪಾಕ್ಷಪ್ಪ, ಎಸ್ ಡಿಎಂಸಿ ಹಳೆವಿದ್ಯಾರ್ಥಿ ಸಂಘದ ಸದಸ್ಯರು, ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಯಮುನಾ ಕೆ.ಸ್ಟಾಗತಿಸಿದರು. ಶೈಲಜಾ ಭಂಡಾರಿ ವಂದಿಸಿದರು. ದಿನಕರ ಎಂ. ನಿರೂಪಿಸಿದರು.

LEAVE A REPLY

Please enter your comment!
Please enter your name here