ಮೂಡುಬಿದಿರೆ: ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಂದಿಗೆ ವಯೋವೃದ್ಧನೋರ್ವ ಅಸಭ್ಯವಾಗಿ ವರ್ತಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರೋಪಿಯನ್ನು ಮೂಡಬಿದ್ರೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೆಳವಾಯಿ ಗ್ರಾಮದ ಕುಕ್ಕಡೇಲು ನಿವಾಸಿ 60 ವರ್ಷದ ರೆಹ್ಮಾನ ಎಂದು ತಿಳಿದುಬಂದಿದೆ. ಬಸ್‌ನಲ್ಲಿ ಫುಲ್ ರಶ್ ಆಗಿರುವುದರಿಂದ ಯುವತಿ ನಿಂತುಕೊಂಡು ಪ್ರಯಾಣ ಮಾಡುತ್ತಿದ್ದಳು. ವಯೋವೃದ್ಧ ಪಕ್ಕದಲ್ಲೇ ಇದ್ದ ಸೀಟಿನಲ್ಲಿ ಕುಳಿತ್ತಿದ್ದಾನೆ. ಈ ವೇಳೆ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ.
ಈ ವೀಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಆರೋಪಿಯನ್ನು ಮೂಡಬಿದ್ರೆ ಪೊಲೀಸರು ಬಂಧಿಸಿದ್ದು, ವಿಡಿಯೋದಲ್ಲಿ ಯುವತಿಯ ಮುಖ ಚಹರೆ ಸರಿಯಾಗಿ ಕಂಡು ಬರದ ಕಾರಣ ಗುರುತಿಸಲು ಅಸಾಧ್ಯವಾಗಿದೆ. ಈ ಬಗ್ಗೆ ಆರೋಪಿಗೂ ಸಂತ್ರಸ್ತ ಯುವತಿಯ ಬಗ್ಗೆ ಮಾಹಿತಿ ತಿಳಿದಿಲ್ಲ.
ಹೀಗಾಗಿ ಸಂತ್ರಸ್ತ ಯುವತಿ ಅಥವಾ ಈ ವ್ಯಕ್ತಿಯಿಂದ ತೊಂದರೆಗೊಳಗಾದ ಯಾರಾದರೂ ನೇರವಾಗಿ ಮೂಡಬಿದ್ರೆ ಪೊಲೀಸ್‌ಠಾಣೆಗೆ ಬಂದು ದೂರನ್ನು ನೀಡಬಹುದು. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.