ಮೂಡುಬಿದಿರೆ ಜೈನಮಠದ ಧರ್ಮ ಜಾಗೃತಿ ಅಭಿಯಾನಕ್ಕೆ ಚಾಲನೆ

0
65

ಮೂಡುಬಿದಿರೆ: ರಾಷ್ಟ್ರೀಯ, ಧರ್ಮ ಹಾಗೂ ಯೋಧರು, ಅವರ ಕುಟುಂದ ರಕ್ಷಣೆ ಹಾಗೂ ಶ್ರೀ ಕೃಷ್ಣ ಜನ್ಮ ಭೂಮಿ ಮುಕ್ತಿಗಾಗಿ ಶ್ರೀ ಸಾಯಿ ಈಶ್ವರ ಗುರೂಜಿಯವರು ಸಂಕಲ್ಪದಲ್ಲಿ ಹಮ್ಮಿಕೊಂಡ 108 ದಿನ 108 ಮಠ, ಮಂದಿರ, ಪುಣ್ಯ ಕ್ಷೇತ್ರಗಳ `ಸತ್ಯ-ಧರ್ಮಕ್ಕೆ ಜ್ಞಾದ ನಡೆ’ ಎನ್ನುವ ಧರ್ಮ ಜಾಗೃತಿ ಅಭಿಯಾನಕ್ಕೆ ಬುಧವಾರ ಮೂಡುಬಿದಿರೆ ಜೈನಮಠದಲ್ಲಿ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿಚಾರ್ಯವರ್ಯ ಸ್ವಾಮೀಜಿ ಚಾಲನೆ ನೀಡಿದರು.

108 ಧಾರ್ಮಿಕ ಕ್ಷೇತ್ರವನ್ನು ಭೇಟಿ ಮಾಡಲಿರುವ ಗುರೂಜಿಯವರನ್ನು ಭಟ್ಟಾರಕ ಸ್ವಾಮೀಜಿ ಬರಮಾಡಿಕೊಂಡು, ಮಠದ ಭಗವಾನ್ ಪಾರ್ಶ್ವನಾಥ ಸ್ವಾಮಿಗೆ ವಿಶೇಷ ಅಭಿಷೇಕ, ಪಟ್ಟದ ಕುಷ್ಮಾಂಡಿನಿ ದೇವಿಗೆ ಪೂಜೆ ಸಲ್ಲಿಸಿ ಶುಭ ಕೋರಿದರು. ಧರ್ಮ ಸಂದೇಶ ನೀಡಿದ ಭಟ್ಟಾರಕ ಸ್ವಾಮೀಜಿ, ಮಥುರಾ ಕ್ಷೇತ್ರ ಮುಕ್ತಿ, ಸನಾತನ ಧರ್ಮ ಸಂಘಟನೆ ಹಾಗೂ ಧರ್ಮ ಜಾಗೃತಿ ನಡೆಸುವುದು ಮಾತ್ರವಲ್ಲ ದೇಶ ಕಾಯುವ ಯೋಧರಿಗೆ ಈ ಮೂಲಕ ಗೌರವ ಸಲ್ಲಿಸುವ ಪರಿಕಲ್ಪನೆ ಉತ್ತಮ ಕಾರ್ಯ. ಸರ್ವಧರ್ಮದವರ ಬಗ್ಗೆ ಕಾಳಜಿಯಿತುವ ಸಾಯಿ ಆಶ್ರಮದ ಶ್ರೀಗಳ ಸಂಕಲ್ಪಕ್ಕೆ ಸರ್ವರು ಕೈಜೋಡಿಸಬೇಕೆಂದು ಆಶಯ ವ್ಯಕ್ತಪಡಿಸಿದರು.
ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ವಿಜಯ ಕುಮಾರ್ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here