ಮೂಡುಬಿದಿರೆ : ಕೋಟೆಬಾಗಿಲು ಶ್ರೀ ವೀರಮಾರುತಿ ದೇವಸ್ಥಾನದಲ್ಲಿ ಗುರುವಾರ ಹನುಮ ಜಯಂತಿ ಪ್ರಯುಕ್ತ ಲಕ್ಷ ತುಳಸಿ ಅರ್ಚನೆ ಪೂಜೆ ನಡೆಯಿತು.
ಬೆಳಿಗ್ಗೆ ವೀರಮಾರುತಿಗೆ ಸಾರ್ವಜನಿಕ ಸೀಯಾಳಾಭಿಷೇಕ, ನಂತರ ಗಣಹೋಮ, ಪವಮಾನ ಹೋಮ ಕಲಶಾಭಿಷೇಕ ಜರಗಿತು. ಭಜನೆ ಸಂಕೀರ್ತನೆಯ ಬಳಿಕ ಮಧ್ಯಾಹ್ನದ ಮಹಾಪೂಜೆ ನೆರವೇರಿತು. ನಂತರ ಹವ್ಯಾಸಿ ಕಲಾವಿದರ ಕೂಡುವಿಕೆಯಿಂದ ‘ಸುಗ್ರೀವ ಸಖ್ಯ’ ತಾಳಮದ್ದಳೆ ಪ್ರದರ್ಶನಗೊಂಡಿತು. ಕಾರ್ಕಳ ಅಯ್ಯಪ್ಪ ಮಂದಿರದ ಗುರುಸ್ವಾಮಿ ಬಾಲಕೃಷ್ಣ ಹೆಗ್ಡೆ ನೇತ್ರತ್ವದಲ್ಲಿ ಬೆಂಗಳೂರು ಹೆಗ್ಗಡೆ ಸಂಘದ ಸಹಕಾರದೊಂದಿಗೆ ಸಂಜೆ ಕ್ಷೇತ್ರದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸಾರ್ವಜನಿಕ ಲಕ್ಷ ತುಳಸಿ ಅರ್ಚನೆ ಪೂಜೆ ನಡೆಯಿತು. ಸೇರಿದ ನೂರಾರು ಭಕ್ತರು ರಾಮನಾಮವನ್ನು ಪಠಿಸಿದ ಬಳಿಕ ಹನುಮಂತ ದೇವರಿಗೆ ತುಳಸಿಯನ್ನು ಸಮರ್ಪಿಸಲಾಯಿತು.
ರಾತ್ರಿ ರಂಗಪೂಜೆ, ದೀಪಾಲಂಕಾರ ನಡೆಯಿತು. ವೀರಮಾರುತಿ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ಯಾಮ ಹೆಗ್ಡೆ, ಕಾರ್ಯದರ್ಶಿ ಅನಿಲ್ ಹೆಗ್ಡೆ, ದ.ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಅಧ್ಯಕ್ಷ ಪ್ರಭಾಕರ ಹೆಗ್ಡೆ, ಕಾರ್ಯದರ್ಶಿ ಶುಭರಾಜ ಹೆಗ್ಡೆ, ಬೆಂಗಳೂರು ಹೆಗ್ಗಡೆ ಸಂಘದ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಸಂಘದ ಕಟ್ಟಡ ಸಮಿತಿ ಅಧ್ಯಕ್ಷ ಯೋಗೀಶ್ ಹೆಗ್ಡೆ, ಮುಂಬಯಿ ಹೆಗ್ಗಡೆ ಸಂಘದ ಅಧ್ಯಕ್ಷ ಮನೋಜ್ ಹೆಗ್ಡ, ದ.ಕ ಜಿಲ್ಲಾ ಹೆಗ್ಗಡೆ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ಹೆಗ್ಡೆ, ಕಾರ್ಯದರ್ಶಿ ಲತಾ ಯು ಹೆಗ್ಡೆ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

