ಮೂಡುಬಿದಿರೆ: ಮೆಸ್ಕಾಂ ಸಿಬ್ಬಂದಿಗಳ ಎಡವಟ್ಟೋ…? ಅಥವಾ ವಿದ್ಯುತ್ ಮೀಟರ್‌ನ ತಾಂತ್ರಿಕ ದೋಷವೋ… ? ಗೊತ್ತಿಲ್ಲ. ಮೂಡುಬಿದಿರೆಯ ಗ್ರಾಹಕರೋರ್ವರಿಗೆ ಮೂಡುಬಿದಿರೆ ಮೆಸ್ಕಾಂ ಚೆನ್ನಾಗಿಯೇ ಶಾಕ್ ನೀಡಿದೆ. ಅದೇನಂತೀರಾ ಈ ಸ್ಟೋರಿ ಓದಿ.

ಮೂಡುಬಿದಿರೆಯಲ್ಲಿ ಕಾರ್ಯಾಚರಿಸುತ್ತಿರುವ ಕಚೇರಿಗೆ ಸರಾಸರಿ 1500ರ ಆಸುಪಾಸಿನಲ್ಲಿ ವಿದ್ಯುತ್ ಬಿಲ್ ಬರುತಿತ್ತು. ಆದರೆ ಜುಲೈ ತಿಂಗಳಲ್ಲಿ ಬಂದ ಬಿಲ್ ನೋಡಿ ಗ್ರಾಹಕ ಅಕ್ಷರಶಃ ಶಾಕ್‌ಗೆ ಒಳಗಾಗಿದ್ದಾರೆ. ಕಾರಣ ಒಂದೆರಡು ಸಾವಿರ ವ್ಯತ್ಯಾಸವಲ್ಲ… ಬರೋಬ್ಬರಿ 40 ಸಾವಿರದಷ್ಟು ಬಲ್ ಅಧಿಕವಾಗಿ ಮುದ್ರಿಸಿ ಬಂದಿದ್ದು, ಈ ರೀತಿಯ ತಾಂತ್ರಿಕ ದೋಷದ ಬಗ್ಗೆ ಮೆಸ್ಕಾಂ ಸ್ಪಷ್ಟನೆ ನೀಡಬೇಕಿದೆ. ಕಳೆದ ತಿಂಗಳು 1531 ರೂ. ಬಿಲ್ ಬಂದಿತ್ತು. ಈ ತಿಂಗಳ ಬಿಲ್‌ನಲ್ಲಿ ಉಪಮೊತ್ತ 1255 ರೂ. ಎಂದು ನಮೂದಿಸಲಾಗಿದ್ದು, ಆದರೆ ಅಧಿಕ ಪ್ರಮಾಣ ದಂಡ (ಬಿಎಂಡಿ) ಎಂದು ನಮೂದಿಸಿ 3896.89 ಎಂದು ನಮೂದಾಗಿದ್ದು, ಪಾವತಿಸುವ ಒಟ್ಟು ಮೊತ್ತ 41914.00 ಎಂದು ಮುದ್ರಿಸಲಾಗಿದ್ದು, ಮೀಟರ್ ದೋಷವಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಹಲವು ಗ್ರಾಹಕರಿಗೆ ಈ ರೀತಿ ಮೆಸ್ಕಾಂ ಶಾಕ್ ನೀಡಿರುವ ಉದಾಹರಣೆ ಇದೆ. ಆದರೆ ಇಷ್ಟೊದು ದೊಡ್ಡ ಮೊತ್ತದ ಎಡವಟ್ಟು ಮಾಡಿರುವುದು ಅಪರೂಪದ ಘಟನೆ ಎನ್ನಲಾಗಿದೆ.
ಅದೇನೇ ಇರಲಿ ಬಿಲ್ ನಲ್ಲಿ ಏಕಾಏಕಿ ಇಷ್ಟೊಂದು ಮೊತ್ತದ ವ್ಯತ್ಯಾಸ ಕಂಡು ಬಂದಾಗ ಗ್ರಾಹಕರಿಗೆ ಬಿಲ್ ನೀಡದೆ ಸ್ವಯಂಪ್ರೇರಿತವಾಗಿ ಮೆಸ್ಕಾಂ ಮೀಟರನ್ನು ಪರಿಶೀಲಿಸಲು ಕ್ರಮ ಕೈಗೊಳ್ಳಬೇಕೆಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುವ ಮಾತಾಗಿದೆ.