ಮೂಡುಬಿದಿರೆ: ಇಲ್ಲಿಯ ತಾಲೂಕು ಆಡಳಿತ ಸೌಧದ ಎದುರು, ಇಂದಿರಾ ಕ್ಯಾಂಟೀನ್ ಹಿಂಬದಿ ಇರುವ ಎಸ್ ಇ ಎಸ್ ಮಾಸ್ಟರ್ ಕಮರ್ಷಿಯಲ್ ಸೆಂಟರ್ ನಲ್ಲಿ ವಕೀಲರ ನೂತನ ಕಚೇರಿ ಮತ್ತು ಧ್ಯಾನ ಜನಸೇವಾ ಕೇಂದ್ರದ ಶುಭಾರಂಭವು ಜು. ೨೮ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.
ಉದ್ಘಾಟನೆಯನ್ನು ವಕೀಲರಾದ ಶಾಂತಿಪ್ರಸಾದ್ ಹೆಗ್ಡೆ ನೆರವೇರಿಸಲಿದ್ದು, ಮಂಗಳೂರು ವಿಶ್ವಕರ್ಮ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಹರೀಶ್ ಆಚಾರ್ಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಪರಿವರ್ತನಾ ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಕೃಷ್ಣಾನಂದ, ಹಿರಿಯ ಆದಿದ್ರಾವಿಡ ಮುಖಂಡ ಕಿರಣ್ ಕುಮಾರ್ ಬಿ., ಗಣೇಶ್ ಪ್ರಸಾದ್, ಉಪನ್ಯಾಸಕ ರಘು ಧರ್ಮಸೇನ್, ವಕೀಲ ಇರ್ಷಾದ್ ಮೂಡುಬಿದಿರೆ ಹಾಗೂ ತುಳುನಾಡು ವಾರ್ತೆ ಪತ್ರಿಕೆಯ ಸಂಪಾದಕರಾದ ಪುನೀತ್ ಮುಂಡ್ಕೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮೂಡುಬಿದಿರೆ ಭಾರತೀಯ ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷರು, ನ್ಯಾಯವಾದಿ ಸುರೇಶ್ ಬಿ. ಹಾಗೂ ಧ್ಯಾನ ಜನಸೇವಾ ಕೇಂದ್ರದ ಸುಮಿತ್ರಾ ಕೆಲ್ಲಕೆರೆ ತಿಳಿಸಿದ್ದಾರೆ.