ವಕೀಲ ಸುರೇಶ್ ಪಿ.ಬಿ.ಯವರ ಸಾಮಾಜಿಕ ಬದ್ಧತೆ, ಕಳಕಳಿ ವೃತ್ತಿ ಜೀವನದಲ್ಲೂ ಯಶಸ್ಸು ತಂದುಕೊಡಲಿ: ವಕೀಲ ಶಾಂತಿಪ್ರಸಾದ್ ಹೆಗ್ಡೆ
ಮೂಡುಬಿದಿರೆ: ಇಲ್ಲಿನ ತಾಲೂಕು ಆಡಳಿತ ಸೌಧದ ಎದುರು, ಇಂದಿರಾ ಕ್ಯಾಂಟೀನ್ ಹಿಂಬದಿಯಿರುವ ಎಸ್.ಇ.ಎಸ್. ಮಾಸ್ಟರ್ ಕಮರ್ಷಿಯಲ್ ಸೆಂಟರ್‌ನಲ್ಲಿ ನ್ಯಾಯವಾದಿ ಸುರೇಶ್ ಪಿ.ಬಿ. ಅವರ ನೂತನ ವಕೀಲರ ಕಚೇರಿ ಮಂಗಳವಾರ ಶುಭಾರಂಭಗೊಂಡಿತು.
ಇದೇ ವೇಳೆ ಧ್ಯಾನ ಜನಸೇವಾ ಕೇಂದ್ರಕ್ಕೂ ಚಾಲನೆ ನೀಡಲಾಯಿತು. ಹಿರಿಯ ವಕೀಲ ಶಾಂತಿಪ್ರಸಾದ್ ಹೆಗ್ಡೆಯವರು ಕಚೇರಿ ಉದ್ಘಾಟಿಸಿ ಶುಭ ಹಾರೈಸಿದರು. ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಹರೀಶ್ ಆಚಾರ್ಯ, ಪರಿವರ್ತನಾ ಕೋ-ಆಪರೇಟಿವ್ ಸೊಸೈಟಿ, ಬಜ್ಪೆ ಇದರ ಅಧ್ಯಕ್ಷ ಕೃಷ್ಣಾನಂದರವರು ದೀಪಪ್ರಜ್ವಲನೆಗೈದರು.
ವಕೀಲರಾದ ಸುರೇಶ್ ಪಿ.ಬಿ.ಯವರನ್ನು ಅವರ ವಿದ್ಯಾರ್ಥಿ ಜೀವನದಿಂದಲೇ ನಾನು ನೋಡಿಕೊಂಡು ಬಂದಿದ್ದೇನೆ. ಅವರ ಸಾಮಾಜಿಕ ಬದ್ಧತೆ, ಕಳಕಳಿ ವೃತ್ತಿ ಜೀವನದಲ್ಲೂ ಯಶಸ್ಸು ತಂದುಕೊಡಲಿ. ಪರಿಶ್ರಮದಿಂದ ಅವರು ಮುಂದೆ ಬಂದು ಸಮಾಜಕ್ಕೆ ಮಾದರಿಯಾಗಬೇಕು, ಅವರಿಗೆ ಶುಭವಾಗಲಿ ಎಂದು ಶಾಂತಿಪ್ರಸಾದ್ ಹೆಗ್ಡೆ ಶುಭಕೋರಿದರು.

ಹಿರಿಯ ವಕೀಲ ಎಂ.ಎಸ್. ಕೋಟ್ಯಾನ್ ಅವರು ಮಾತನಾಡಿ, ಸುರೇಶ್ ಅವರ ವೃತ್ತಿ ಜೀವನ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು. ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಹರೀಶ್ ಆಚಾರ್ಯ, ಪರಿವರ್ತನಾ ಕೋ-ಆಪರೇಟಿವ್ ಸೊಸೈಟಿ ಲಿ. ಅಧ್ಯಕ್ಷ ಕೃಷ್ಣಾನಂದ, ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಗಣೇಶ್ ಪ್ರಸಾದ್, ಹಿರಿಯ ಆದಿದ್ರಾವಿಡ ಮುಖಂಡ ಕಿರಣ್ ಕುಮಾರ್, ಪತ್ರಕರ್ತ ಸೀತಾರಾಮ ಆಚಾರ್ಯ ಮಾತನಾಡಿ ಶುಭಕೋರಿದರು. ಮೂಡುಬಿದಿರೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕೃಷ್ಣಪ್ಪ, ಭಾರತೀಯ ಸಮಾಜ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರುಗಳಾದ ಉಮೇಶ್ ಕೋಟೆಬಾಗಿಲು ಮತ್ತು ಜಗನಾಥ ಕೋಟೆಬಾಗಿಲು, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಕಾಲೇಜಿನ ನಿವೃತ್ತ ಉಪಪ್ರಾಂಶುಪಾಲ ಸೋಮಪ್ಪ ಅಲಂಗಾರ್, ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಅರ್ಬಿಗುಡ್ಡೆ, ತಾಲೂಕು ಅಧ್ಯಕ್ಷ ಶ್ರೀನಿವಾಸ್ ಪುಚ್ಚಮೊಗರು, ಭಾರತೀಯ ಸಮಾಜ ಕೋ-ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ್ ನೆಲ್ಲಿಕಾರ್, ಪತ್ರಕರ್ತ ಯಶೋಧರ ಬಂಗೇರ, ಪ್ರಮುಖರಾದ ಶಿವರಾಜ್ ಮಾಂಟ್ರಾಡಿ, ದಯಾನಂದ ನಾಯ್ಕ್, ಶ್ರೀನಿವಾಸ್ ಮಿಜಾರು, ಸತೀಶ್ ಕಕ್ಯಪದವು, ದಯಾನಂದ ನಾಯ್ಕ್, ಶ್ರೇಯಸ್ ಶಿರ್ತಾಡಿ, ಕಿರಣ್‌ಬಾಬು ವಾಲ್ಪಾಡಿ, ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಬನ್ನಡ್ಕದ ಉಪನ್ಯಾಸಕಿ ಡಾ. ಸುಜಾತಾ, ಮಂಗಳೂರು ವಿಶ್ವವಿದ್ಯಾಲಯ ಎಂಬಿಎ ವಿಭಾಗದ ಸಂಶೋಧಕಿ ಪೃಥ್ವಿದೀಕ್ಷಾ, ಧ್ಯಾನ ಜನಸೇವಾ ಕೇಂದ್ರದ ಮುಖ್ಯಸ್ಥೆ ಸುಮಿತ್ರಾ ಕೆಲ್ಲಕೆರೆ ಮತ್ತಿತರ ಹಲವು ಪ್ರಮುಖರು ಉಪಸ್ಥಿತರಿದ್ದರು. ನೂತನ ಕಚೇರಿಗೆ ಸಂಜೆವರೆಗೂ ಹಲವು ಪ್ರಮುಖರು, ಮಿತ್ರರು ಆಗಮಿಸಿ ಶುಭ ಹಾರೈಸಿದರು.