ಮೂಡುಬಿದಿರೆ : ತುಳುನಾಡಿನ ಜನಪದ ಕ್ರೀಡೆಯ ಪ್ರತಿಷ್ಠಿತ ವೇದಿಕೆಯಾದ 23ನೇ ವರ್ಷದ ಕೋಟಿ-ಚೆನ್ನಯ ಜೋಡುಕರೆ ಕಂಬಳ ಕೂಟ ಶನಿವಾರ ಹಾಗೂ ಭಾನುವಾರ ನಡೆಯಿತು. ಈ ಬಾರಿ ದಾಖಲೆಯ 236 ಜೋಡಿ ಕೋಣಗಳು ವಿವಿಧ ವಿಭಾಗಗಳಲ್ಲಿ ಪಾಲ್ಗೊಂಡು ಕಂಬಳ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿವೆ.
ಹೊನಲು ಬೆಳಕಿನ ನಡುವೆ ನಡೆದ ಕಂಬಳ ಓಟದಲ್ಲಿ ಹಿರಿಯ-ಕಿರಿಯ ವಿಭಾಗಗಳಲ್ಲಿ ತೀವ್ರ ಸ್ಪರ್ಧೆ ಕಂಡುಬಂದಿತು. ಕನೆಹಲಗೆ 11 ಜೊತೆ,ಅಡ್ಡಹಲಗೆ 09 ಜೊತೆ, ಹಗ್ಗ ಹಿರಿಯ 19 ಜೊತೆ , ನೇಗಿಲು ಹಿರಿಯ 36 ಜೊತೆ , ಹಗ್ಗ ಕಿರಿಯ 39 ಜೊತೆ ,ನೇಗಿಲು ಕಿರಿಯ 122 ಜೊತೆ , ಒಟ್ಟು ಕೋಣಗಳ ಸಂಖ್ಯೆ 236 ಜೊತೆ ಇದ್ದವು.
*ಅಡ್ಡ ಹಲಗೆ : ಪ್ರಥಮ – ನಾರ್ಯ ಗುತ್ತು ಕುವೆತ್ತಬೈಲು ಸಂತೋಷ್ ರೈ ಬೊಳ್ಯಾರು (12.33) , ಹಲಗೆ ಮುಟ್ಟಿದವರು ಬೈಂದೂರು ಮಹೇಶ್ ಪೂಜಾರಿ.
ದ್ವಿತೀಯ – ಇರುವೈಲು ದೊಡ್ಡಗುತ್ತು ಜಗದೀಶ್ ಎಂ ಶೆಟ್ಟಿ (12.64) ಹಲಗೆ ಮುಟ್ಟಿದವರು ತೆಕ್ಕಟ್ಟೆ ಸುಧೀರ್ ದೇವಾಡಿಗ.
*ಹಗ್ಗ ಹಿರಿಯ : ಪ್ರಥಮ ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ (11.45) , ಓಡಿಸಿದವರು ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ.
ದ್ವಿತೀಯ ಅತ್ತೂರು ಮನ್ಮಥ ಜೆ ಶೆಟ್ಟಿ “ಬಿ” (12.02) ಓಡಿಸಿದವರು ಬಾರಾಡಿ ನತೀಶ್ ಸಫಲಿಗ.
*ಹಗ್ಗ ಕಿರಿಯ : ಪ್ರಥಮ – ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ ಶೆಟ್ಟಿ “ಬಿ” (11.72), ಓಡಿಸಿದವರು ಕಾವೂರುದೋಟ ಸುದರ್ಶನ್.
ದ್ವಿತೀಯ – ಉಡುಪಿ ಕಕ್ಕುಂಜೆ ರಾಧ ನಿಲಯ ಸಂತೋಷ್ ಶಿವರಾಜ್ ಪೂಜಾರಿ “ಬಿ” (12.02), ಓಡಿಸಿದವರು ಬೈಂದೂರು ವಿಶ್ವನಾಥ ದೇವಾಡಿಗ.
*ನೇಗಿಲು ಹಿರಿಯ : ಪ್ರಥಮ – ತೊಡಾರು ಪಂಚಶಕ್ತಿ ಬಾರ್ದಿಲ ಶ್ಲೋಕ್ ರಂಜಿತ್ ಪೂಜಾರಿ (12.10) , ಓಡಿಸಿದವರು ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ.
ದ್ವಿತೀಯ – ನೂಜಿಪ್ಪಾಡಿ ಡಾ.ಪ್ರವೀಣ್ ಹೊಳ್ಳ (12.13) , ಓಡಿಸಿದವರು ನಕ್ರೆ ಪವನ್ ಮಡಿವಾಳ.
*ನೇಗಿಲು ಕಿರಿಯ : ಪ್ರಥಮ – ಮಿಯಾರ್ ಬೋರ್ಕಟ್ಟೆ ಮಿತ್ಲೊಟ್ಟು ಪೃಥ್ವಿ ಪ್ರಾಪ್ತಿ ಸಂಧ್ಯಾ ಪ್ರಭಾಕರ ಶೆಟ್ಟಿ “ಎ” (11.22) ,ಓಡಿಸಿದವರು ಪಡು ಸಾಂತೂರು ಪೃಥ್ವಿರಾಜ್ .
ದ್ವಿತೀಯ – ಎರ್ಮಾಳ್ ಪುಚ್ಚೊಟ್ಟುಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ “ಎ” (11.46), ಓಡಿಸಿದವರು ಕುಂದ ಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್.

