ಮೂಡಬಿದ್ರಿ: ಇಲ್ಲಿನ ಜೈನ ಮಠದ ಆಯೋಜನೆಯಲ್ಲಿ ಪೂಜ್ಯ ಸ್ವಸ್ತಿ ಶ್ರೀ ಡಾ .ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳ ನೇತೃತ್ವದಲ್ಲಿ ಫೆಬ್ರವರಿ 26 ರಂದು ನಡೆಯಲಿರುವ ಭಾರತೀಯ ಸಂತ ಮಹಾಪರಿಷತ್ತಿನ ಪ್ರಾಂತೀಯ ಸಂತ ಸಮ್ಮೇಳನದ ಅಂಗವಾಗಿ ಸಂತ ಸಮ್ಮೇಳನ ಸಮಿತಿಯ ಪದಾಧಿಕಾರಿಗಳು ಶ್ರೀ ಹರಿಹರಪುರ ಮಠಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳಿಗೆ ನಾರಿಕೇಳ ಫಲ ಸಹಿತ ಗುರು ಕಾಣಿಕೆ ಅರ್ಪಿಸಿ ಪೂರ್ವಭಾವಿ ಸಮಾಲೋಚನೆ ನಡೆಸಿ ಪೂಜ್ಯರನ್ನು ಸಮ್ಮೇಳನಕ್ಕೆ ಆಮಂತ್ರಿಸಲಾಯಿತು. ಸಂತ ಸಮ್ಮೇಳನ ಸ್ವಾಗತ ಸಮಿತಿಯ ಸಂಚಾಲಕ ಎಂ ಬಾಹುಬಲಿ ಪ್ರಸಾದ್,ಕಾರ್ಯದರ್ಶಿ ಎಂ ಶಾಂತರಾಮ ಕುಡ್ವ,ಜOಟೀ ಕಾರ್ಯದರ್ಶಿಗಳಾದ ಕೆ.ಶಿವ ಭಂಡಾರ್ಕರ್ ಮತ್ತು ಎಂ ರಾಘವೇಂದ್ರ ಭಂಡಾರ್ಕರ್ ಉಪಸ್ಥಿತರಿದ್ದು ಭಾರತೀಯ ಸಂತ ಮಹಾಪರಿಷತ್ತಿನ ಸಂತ ಸಂಪರ್ಕ ಸಂಚಾಲಕರಾದ ಆಕಾಶ್ ವಿಶ್ವಾಮಿತ್ರ ಸಹಕರಿಸಿದರು.

