ಮೂಡುಬಿದಿರೆ: ಅಂತರಾಷ್ಟ್ರೀಯ ಗುಣಮಟ್ಟದ ‘OiA -ಫ್ಯಾಮಿಲಿ ಸಲೂನ್’ (OiA The Family Salon) ನೂತನ ಶಾಖೆಯು ಜನವರಿ 14ರ ಬುಧವಾರದಂದು ಮೂಡುಬಿದಿರೆಯಲ್ಲಿ ಶುಭಾರಂಭಗೊಳ್ಳಲಿದೆ.
ಮೂಡುಬಿದಿರೆಯ ಪುರಸಭೆ ಕಚೇರಿಯ ಎದುರಿಗಿರುವ ‘ಫಾರ್ಚೂನ್ ನೀತಿ ಹೈಟ್ಸ್’ ಕಟ್ಟಡದ ಮೊದಲ ಮಹಡಿಯಲ್ಲಿ ಈ ಸುಸಜ್ಜಿತ ಸಲೂನ್ ಕಾರ್ಯಾರಂಭ ಮಾಡಲಿದ್ದು, ಸಂಜೆ 6:00 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಮೂಡುಬಿದಿರೆಯ ವಿವಿಧ ಕ್ಷೇತ್ರದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು.
ಮಂಗಳೂರು ಮತ್ತು ಕಾರ್ಕಳದಲ್ಲಿ ಈಗಾಗಲೇ ತನ್ನ ವಿಶಿಷ್ಟ ಸೇವೆಯ ಮೂಲಕ ಜನಪ್ರಿಯತೆ ಗಳಿಸಿರುವ ‘OiA’, ಜೈನಕಾಶಿ ಮೂಡುಬಿದಿರೆಗೂ ತನ್ನ ಸೇವೆಯನ್ನು ವಿಸ್ತರಿಸುತ್ತಿದೆ.
ವಿಶೇಷತೆಗಳು :
ಈ ನೂತನ ಶಾಖೆಯಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ಅನ್ವಯವಾಗುವಂತೆ- ಕೇಶ ವಿನ್ಯಾಸ (Hair Care): ಅಂತರಾಷ್ಟ್ರೀಯ ಮಟ್ಟದ ಹೇರ್ ಕಟ್ ಮತ್ತು ಸ್ಟೈಲಿಂಗ್, ತ್ವಚೆ ಆರೈಕೆ (Skin Care): ಅತ್ಯಾಧುನಿಕ ಫೇಶಿಯಲ್ ಮತ್ತು ಸ್ಕಿನ್ ಟ್ರೀಟ್ಮೆಂಟ್ , ನಖಾಲಂಕಾರ (Nails) ನೈಲ್ ಆರ್ಟ್ ಮತ್ತು ಪೆಡಿಕ್ಯೂರ್-ಮೆನಿಕ್ಯೂರ್ ಸೇವೆಗಳು, ವಧುವಿನ ಅಲಂಕಾರ ಸೇರಿದಂತೆ ಎಲ್ಲಾ ಶುಭ ಸಮಾರಂಭಗಳಿಗೆ ವೃತ್ತಿಪರ ಮೇಕಪ್ ಸೌಲಭ್ಯಗಳು ಲಭ್ಯವಿವೆ.
“ನಮ್ಮ ಗ್ರಾಹಕರಿಗೆ ಅತ್ಯುತ್ತಮ ಸೌಂದರ್ಯ ಸೇವೆಗಳನ್ನು ನೀಡುವುದು ನಮ್ಮ ಗುರಿ. ಮಂಗಳೂರು ಮತ್ತು ಕಾರ್ಕಳದ ನಂತರ ಮೂಡುಬಿದಿರೆಯಲ್ಲಿ ಶಾಖೆ ತೆರೆಯುತ್ತಿರುವುದು ನಮಗೆ ಸಂತಸ ತಂದಿದೆ,” ಎಂದು ಸಂಸ್ಥೆಯ ಮಾಲಿಕರಾದ ಬಾಸ್ಕೋ ಡಿ’ಸೋಜಾ ತಿಳಿಸಿದ್ದಾರೆ.
OiA – The Family Salon – 1ನೇ ಮಹಡಿ, ಫಾರ್ಚೂನ್ ನೀತಿ ಹೈಟ್ಸ್, ನಗರಸಭೆ ಕಚೇರಿ ಎದುರು, ಮೂಡುಬಿದಿರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 96118 36022, +91 91873 60646.

