ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆಯಲ್ಲಿ ಕಾರ್ಯಾಚರಿಸುತ್ತಿರುವ ಪ್ರೇರಣಾ ಸೇವಾ ಟ್ರಸ್ಟ್ ಇದರ ನೂತನ ಕಾರ್ಯಾಲಯದ ಶಿಲಾನ್ಯಾಸ ಸಮಾರಂಭ ನವೆಂಬರ್ 3ರಂದು ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಅಧ್ಯಕ್ಷರಾದ ಕ್ಷೇತ್ರೀಯ ಸಂಘ ಚಾಲಕ ಡಾ.ವಾಮನ್ ಶೆಣೈ ಅವರು ಕಾರ್ಯಾಲಯಕ್ಕೆ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಉದ್ಯಮಿಗಳಾದ ಬರೋಡ ಶಶಿಧರ್ ಶೆಟ್ಟಿ ಹಾಗೂ ಪ್ರೇರಣಾ ಟ್ರಸ್ಟ್ ಇದರ ಅಧ್ಯಕ್ಷರಾದ ವಿವೇಕಾನಂದ ಕಾಮತ್, ಮುಲ್ಕಿ ಮೂಡುಬಿದರೆ ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಇತರ ಮಹನೀಯರುಗಳು ಉಪಸ್ಥಿತರಿದ್ದರು.
ಮಂಜುನಾಥ ಸ್ವಾಗತಿಸಿದರು. ಕೇಶವ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಅಜಿತ್ ವಂದಿಸಿದರು.

