ಇದೇ ಬರುವ 26-2-2026 ನೇ ಗುರುವಾರದಂದು ಜೈನ ಕಾಶಿ ಮೂಡುಬಿದಿರೆಯ ಮಹಾವೀರ ಭವನದಲ್ಲಿ ಸನಾತನ ಧರ್ಮದ ಏಕತೆಗಾಗಿ ವಿರಾಟ್ ಸಂತ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಮೂಡುಬಿದಿರೆ ಧವಳತ್ರಯ ಟ್ರಸ್ಟ್ (ರಿ) ಆಯೋಜನೆಯಲ್ಲಿ ಮೂಡುಬಿದಿರೆ ಜೈನ ಮಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿ ಶ್ರೀ ಡಾ.ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳ ಸಾರಥ್ಯದಲ್ಲಿ ಸಮ್ಮೇಳನ ನಡೆಯಲಿದೆ.
ನಾಲ್ಕು ಜಿಲ್ಲೆಯ 50 ಕ್ಕೂ ಹೆಚ್ಚಿನ ಪರಮ ಪೂಜ್ಯ ಸಂತರುಗಳು ಆಗಮಿಸಲಿದ್ದು, ಬಡಗು ಬಸದಿ ಬಳಿಯಿಂದ ಬೆಳಿಗ್ಗೆ 9.00 ಕ್ಕೆಸರಿಯಾಗಿ ಮೂಡುಬಿದಿರೆ ಜೈನ ಮಠದ ವರೆಗೆ ಸಕಲ ಬಿರುದು ಬಾವಲಿ, ಕುಣಿತ ಭಜನೆ,ಮಂಗಳ ವಾದ್ಯಗಳ ಸಹಿತ ಸಾಗಲಿರುವ ಸಂತರಿಗೆ ಭವ್ಯ ಸ್ವಾಗತ ಕೋರಲಿರುವ ಶೋಭಾಯಾತ್ರೆಗೆ ಪೂಜ್ಯ ಎಲ್ಲಾ ಪರಮ ಪೂಜ್ಯರು ಡಾ .ಚಾರುಕೀರ್ತಿ ಶ್ರೀಗಳು ಧರ್ಮಾದಿಕಾರಿ ಗಳು ಚಾಲನೆ ನೀಡಲಿದ್ದಾರೆ.
ಶ್ರೀ ಮಠ ದಲ್ಲಿ ದೀಪ ಬೆಳಗಿಸಿ ನಂತರ ಶ್ರೀ ಮಹಾವೀರ ಭವನದಲ್ಲಿ ಸಂತ ಸಮಾವೇಶ ನೆರವೇರಲಿದೆ. ಸನಾತನ ಧರ್ಮದ ಸಂಸ್ಕೃತಿ,ಧಾರ್ಮಿಕತೆ ವಿಚಾರ, ಒಗ್ಗೂಡುವಿಕೆ ಏಕತೆಗಾಗಿ ಸಮಾವೇಶವನ್ನು ಹಮ್ಮಿಕೊಂಡಿದ್ದು ಧರ್ಮ ಬಂಧುಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಶೋಭಾಯಾತ್ರೆಗೆ ಆಗಮಿಸಿ ಧರ್ಮ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ವಿನಂತಿಸಿಕೊಳ್ಳಲಾಗಿದೆ.

