ಮೂಡುಬಿದಿರೆ: ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮ

0
21

ಮೂಡುಬಿದಿರೆ: ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆ ಮೂಡುಬಿದಿರೆ ಇದರ ಪ್ರವರ್ತನೆಯಲ್ಲಿ ಕಾರ್ಯಚರಿಸುತ್ತಿರುವ ದಿವ್ಯಶ್ರೀ ಸ್ವಸಾಯ ಸಂಘ ಕೆಂಪುಗುಡ್ಡೆ, ಕೆಲ್ಲಪುತ್ತಿಗೆ ಮತ್ತು ಭಾಗ್ಯಲಕ್ಷ್ಮಿ ಸ ಸಹಾಯ ಸಂಘ ಮೂಡುಮಾರ್ನಾಡು ಇದರ ರಜತ ಮಹೋತ್ಸವ ಹಾಗೂ ಮೂಡುಮಾರ್ನಾಡು ವಲಯದ ಸ್ವ ಸಹಾಯ ಸಂಘಗಳ ಸಮಾವೇಶವು ಮೂಡುಮಾರ್ನಾಡು ಪ್ರೌಢ ಶಾಲೆಯಲ್ಲಿ ಜರಗಿತು. ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಭಾಸ್ಕರ ಕೋಟ್ಯಾನ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಆದರ್ಶ ಸಂಸ್ಥೆಯ ಅಧ್ಯಕ್ಷರಾದ ಜೇಕಬ್ ವರ್ಗೀಸ್ ಅಧ್ಯಕ್ಷತೆ ವಹಿಸಿದ್ದರು. ಮೂಡುಮಾರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಾಸುದೇಬ ಭಟ್ಟ್, ಮಾಜಿ ಅಧ್ಯಕ್ಷರಾದ ಶ್ರೀನಾಥ್ ಹೆಗ್ಡೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ್, ಅಂಗನವಾಡಿ ಕಾರ್ಯಕರ್ತೆ ಕುಶಲ, ನವಚೇತನ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷೆ ಶ್ರಿಮತಿ ವಸಂತಿ ಶೆಟ್ಟಿ, ಪಂಚಾಯತ್ ಸದಸ್ಯೆ ಶ್ರೀಮತಿ ಶಕುಂತಳ ಉಪಸ್ಥಿತರಿದ್ದರು. ಸ್ವ ಸಹಾಯ ಸಂಘಗಳ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಗೀತಾ ಹಾಗೂ ಶ್ರೀಲತ ಕಾರ್ಯಕ್ರಮ ನಿರೂಪಿಸಿದರು. ಸುಮತಿ ಕೋಟ್ಯಾನ್ ಸ್ವಾಗತಿಸಿ, ವಿನೋದ ಧನ್ಯವಾದ ನೀಡಿದರು.

LEAVE A REPLY

Please enter your comment!
Please enter your name here