ಸತತ ಪರಿಶ್ರಮದಿಂದ ಜೀವನದಲ್ಲಿ ಉನ್ನತ ಸ್ಥಾನ : ವಿಜಯ್ ವಿಷ್ಣು ಮಯ್ಯ
ಮೂಡುಬಿದಿರೆ: ಒಬ್ಬ ವಿದ್ಯಾರ್ಥಿ ಸತತ ಪರಿಶ್ರಮದಿಂದ ತನ್ನ ಜೀವನದಲ್ಲಿ ಅತ್ಯುನ್ನತ ಮಟ್ಟಕ್ಕೆ ಏರಲು ಸಾಧ್ಯ, ತನ್ನೊಳಗಿನ ಶಕ್ತಿಯನ್ನು ನಂಬಿದರೆ ಸ್ವಂತ ಉದ್ದಿಮೆಯೊಂದಿಗೆ ಹಲವರ ಬಾಳಿಗೆ ಬೆಳಕಾಗಬಹುದು ಎಂದು ಮಂಗಳೂರಿನ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ವಿಜಯ ವಿಷ್ಣು ಮಯ್ಯ ತಿಳಿಸಿದರು.
ಎಸ್ .ಎನ್ ಮೂಡುಬಿದಿರೆ ಪಾಲಿಟೆಕ್ನಿಕ್ ನ ಸಿವಿಲ್ ವಿಭಾಗದ ಅರೈವ ಸಿವಿಲ್ ಕ್ಲಬ್ಬಿನ ವತಿಯಿಂದ ಹಮ್ಮಿಕೊಂಡಿದ್ದ 2025- 26 ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

ಪಾಲಿಟೆಕ್ನಿಕ್ ನ ಇನ್ನೋವೇಶನ್ ಕ್ಲಬ್ಬಿನ ಸಂಯೋಜಕರಾದ ಡಾ. ಎಸ್ ಪಿ ಗುರುದಾಸ್ ಮಾತನಾಡಿ, ಸಿವಿಲ್ ವಿಭಾಗದಲ್ಲಿ ಇನ್ನೋವೇಷನಿಗೆ ವಿಪುಲ ಅವಕಾಶವಿರುವುದನ್ನು ತಿಳಿಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ನೋರೋನ್ಹ ತರೀನಾ ರೀಟಾ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಭಾಗದ ಹಿರಿಯ ವಿದ್ಯಾರ್ಥಿ ಭೂಷಣ್, ವಿಭಾಗ ಮುಖ್ಯಸ್ಥರಾದ ಗೋಪಾಲಕೃಷ್ಣ ಕೆ ಎಸ್, ಸಿವಿಲ್ ಕ್ಲಬ್ಬಿನ ಸಂಯೋಜಕರಾದ ಸುಪ್ರಿಯಾ ಎಸ್., ಕ್ಲಬ್ ಪ್ರೆಸಿಡೆಂಟ್ ಪ್ರಜ್ವಲ್ ಕುಮಾರ್, ವಿಭಾಗದ ಉಪನ್ಯಾಸಕವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ಹಿರಿಯ ವಿದ್ಯಾರ್ಥಿ ಭೂಷಣ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು ಹಾಗೂ ನೂತನವಾಗಿ ಆಯ್ಕೆಯಾದ ಕ್ಲಬ್ಬಿನ ಪದಾಧಿಕಾರಿಗಳನ್ನು ಗೌರವಿಸಲಾಯಿತು.
ಚೈತನ್ಯ ಅತಿಥಿಗಳನ್ನು ಸ್ವಾಗತಿಸಿದರೆ ಶಿಯಾದ್ ವಂದಿಸಿದರು. ಹರ್ಷಿತ ಕಾರ್ಯಕ್ರಮ ನಿರೂಪಿಸಿದರು.

