ಮೂಡುಬಿದಿರೆ: ಶ್ರೀ ಮಹಾವೀರ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ

0
37


ಶ್ರೀ ಮಹಾವೀರ ಕಾಲೇಜು, ಮೂಡುಬಿದಿರೆ ಇಲ್ಲಿನ ಕನ್ನಡ ವಿಭಾಗದ ಕನ್ನಡ ಸಂಘ ಮತ್ತುಆಂತರಿಕ ಗುಣಮಟ್ಟ ಖಾತರಿ ಕೋಶಗಳ ಸಹಯೋಗದೊಂದಿಗೆ ದಿನಾಂಕ 13-8-2025 ರಂದು ವಿಶೇಷ ಉಪನ್ಯಾಸಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಬಂಡಾಯ ಸಾಹಿತಿ, ನಾಡೋಜಡಾ.ಬರಗೂರುರಾಮಚಂದ್ರಪ್ಪ ಭಾಗವಸಿದ್ದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ“ಇಂದು ಶಿಕ್ಷಣ ಮತ್ತುಉದ್ಯಮಕ್ಕೆ ಸಮಾನ ಸಂಬAಧಕಲ್ಪಿಸಲಾಗುತ್ತಿದೆಆದ್ದರಿAದ ಮೂಲ ವಿಜ್ಞಾನ, ಮಾನವಿಕ ವಿಚಾರಗಳನ್ನು ಅಧ್ಯಯನ ಮಾಡುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಶಿಕ್ಷಣದ ಬದುಕನ್ನು ಲಾಭ ನಷ್ಟಗಳ ನೆಲೆಯಲ್ಲಿ ನೋಡುವುದಲ್ಲಅದು ವ್ಯಕ್ತಿಯೊಳಗಿನ ಮಾನವೀಯತೆ ಮತ್ತು ಮೌಲ್ಯಗಳು ಕಡಿಮೆಯಾಗದಂತೆತಡೆಯುವುದೇಅದರಉದ್ದೇಶವಾಗಿವಾಗಿದ್ದು ವಿದ್ಯೆ ಪಡೆಯುವ ವ್ಯಕ್ತಿಯೊಳಗಿನ ಮೃಗತ್ವವನ್ನುಕೊಂದುಅವನನ್ನು ಮನುಷ್ಯನನ್ನಾಗಿಸಲಿ”ಎಂದರು.ಮಾತನ್ನು ಮುಂದುವರೆಸುತ್ತಾ, ಎತ್ತಿನಗಾಡಿಯಚಕ್ರವನ್ನುಕಂಡು ಹಿಡಿದ ದಿನವೇ ತಂತ್ರಜ್ಞಾನರೂಢಿಗೆ ಬಂತು.ಆದರೆಅದೇತAತ್ರಜ್ಞಾನದ ಬಳಕೆ ಅತಿಯಾದರೆಅದು ಮನುಷ್ಯನ ಮನಸ್ಸಿನ ವಿರೋಧಿಯಾಗುತ್ತದೆ.ತಂತ್ರಜ್ಞಾನದ ಭರಾಟೆಯಲ್ಲಿತತ್ವಜ್ಞಾನ, ವಿಜ್ಞಾನಗಳು ಮರೆಯಾಗಿವೆ. ಕಲಾ, ವಿಜ್ಞಾನ, ವಾಣಿಜ್ಯ ಕ್ಷೇತ್ರಗಳಿಗೆ ಸೇರಿದ ಸರ್ವರ ಸಮತೋಲನ ಇದ್ದಲ್ಲಿ ಸಾಮಾಜಿಕ ವ್ಯವಸ್ಥೆಚೆನ್ನಾಗಿರುತ್ತದೆಎಂದರು. ತಮ್ಮ ಸಾಹಿತ್ಯರಚನೆಗೆ ಸ್ಪೂರ್ತಿ ನೀಡಿದ ಗುರುಗಳನ್ನು ನೆನೆದರು.ಪ್ರಕೃತಿಯಲ್ಲಿ ಶ್ರೀಗಂಧವೂ ಮುಖ್ಯವೇಜಾಲಿಯ ಮರವೂ ಮುಖ್ಯವೇ.ಪ್ರಕೃತಿಯಲ್ಲಿಇಲ್ಲದಅಸಮಾನತೆ ಮನುಷ್ಯ ಪ್ರಪಂಚದಲ್ಲಿದೆಇದನ್ನು ಹೋಗಲಾಡಿಸಬೇಕುಎಂದು ತಿಳಿ ಹೇಳಿದರು.
ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಶ್ರೀ ಮಹಾವೀರಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಸಂಪತ್ ಸಾಮ್ರಾಜ್ಯಅವರು ಬರಗೂರುರಾಮಚಂದ್ರಪ್ಪನವರ ಕೃತಿಗಳಲ್ಲಿ ನೀಡಿದ ಅನೇಕ ಉಪಯುಕ್ತ ಮಾತುಗಳನ್ನು ಉಲ್ಲೇಖಿಸಿ ವಿಶಿಷ್ಟ ರೀತಿಯಲ್ಲಿಅವರನ್ನು ಸಭೆಗೆ ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲರಾದಡಾ.ರಾಧಾಕೃಷ್ಣ, ಪದವಿಪೂರ್ವಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ವಿಜಯಲಕ್ಷಿ÷್ಮ, ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಶ್ರೀ ಹರೀಶ್ ಹಾಗೂ ಕಾರ್ಯಕ್ರಮದ ಸಂಯೋಜಕರಾದಕನ್ನಡ ವಿಭಾಗ ಮುಖ್ಯಸ್ಥರುಡಾ.ಚಿನ್ನಸ್ವಾಮಿ, ಎನ್ ಪ್ರಸ್ತಾವನೆಯೊಂದಿಗೆಗಣ್ಯರನ್ನು ಸ್ವಾಗತಿಸಿದರು, ಪ್ರಥಮ ಬಿ.ಎಸ್ಸಿ ಪ್ರಣಮ್ಯ ಮುತ್ತುತಂಡಕನ್ನಡ ಭಾವಗೀತೆಯೊಂದಿಗೆ ಪ್ರಾರ್ಥಿಸಿದರು, ಕನ್ನಡಉಪನ್ಯಾಸಕಿಚಂದನಾ ವಂದಿಸಿದರು ಅಂತಿಮ ಬಿ.ಎಸ್ಸಿ. ವಿದ್ಯಾರ್ಥಿನಿ ರಕ್ಷಿತಾ ಶೆಟ್ಟಿಕಾರ್ಯಕ್ರಮವನ್ನು ನಿರೂಪಿಸಿದರು.

ಪ್ರಕಟಣೆಯ ಕೃಪೆಗಾಗಿ

LEAVE A REPLY

Please enter your comment!
Please enter your name here