ಮೂಡುಬಿದಿರೆ ತಾಲೂಕು ಮಟ್ಟದ ಕ್ರೀಡಾಕೂಟ

0
71

ಮೂಡುಬಿದಿರೆ :ಶಾಲಾ ಶಿಕ್ಷಣ ಇಲಾಖೆ, ಬಿ ಇ ಓ ಕಚೇರಿ, ಹಾಗೂ ಸರಕಾರಿ ಪ್ರೌಢಶಾಲೆ ಪ್ರಾಂತ್ಯ ಇವುಗಳ ಸಹಯೋಗದಲ್ಲಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕ್ರೀಡಾಕೂಟ ಸ್ವರಾಜ್ಯ ಮೈದಾನದಲ್ಲಿ ನಡೆಯಿತು. ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್ ಕ್ರೀಡೆಯಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಸುಸ್ಥಿತಿ ಕಾಪಾಡಿಕೊಳ್ಳಲು ಸಾಧ್ಯವಿದೆ.

ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಶಾರೀರಿಕ ಅಭ್ಯಾಸದಲ್ಲಿ ತೊಡಗಿಕೊಂಡಷ್ಟು ಅವರ ಶಿಕ್ಷಣದ ಗುಣಮಟ್ಟವು ಅಭಿವೃದ್ಧಿಯಾಗಲು ಸಾಧ್ಯ ಇದೆ ಎಂದರು. ವೇದಿಕೆಯಲ್ಲಿ ಎಂ ಸಿ ಎಸ್ ಬೇಂಕಿನ ಅಧ್ಯಕ್ಷ ಬಾಹುಬಲಿ ಪ್ರಸಾದ್‌, ಪುರಸಭಾ ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ನಾಗರಾಜ ಪೂಜಾರಿ, ಪುರಸಭಾ ಸದಸ್ಯರುಗಳು, ಬಿಇಒ ವಿರೂಪಾಕ್ಷಪ್ಪ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

ವರದಿ ರಾಯಿ ರಾಜ ಕುಮಾರ

LEAVE A REPLY

Please enter your comment!
Please enter your name here