ಮೂಡುಬಿದಿರೆ: ಅರಣ್ಯ ಇಲಾಖೆ ಮೂಡುಬಿದಿರೆ ವಲಯ, ಮೂಡುಬಿದಿರೆ ಉಪವಿಭಾಗ, ಕುಂದಾಪುರ ವಿಭಾಗ, ಮಂಗಳೂರು ವೃತ್ತ ಹಾಗೂ ರೋಟರಿ ಕ್ಲಬ್ ಮೂಡುಬಿದಿರೆ ಇವರ ಸಹಯೋಗದಲ್ಲಿ ನಡೆದ ವನಮಹೋತ್ಸವ, ಕಡಲಕೆರೆಗೆ ಮೀನು ಬಿಡುವ ಕಾರ್ಯಕ್ರಮ ಹಾಗೂ ಬೋಟಿಂಗ್ ಆರಂಭಕ್ಕೆ ಕ್ಷೇತ್ರದ ಶಾಸಕ ಉಮಾನಾಥ ಎ ಕೋಟ್ಯಾನ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು “ ಕಡಲಕೆರೆಯು ೩೬೫ ದಿನಗಳ ಕಾಲವೂ ಬೋಟಿಂಗ್ ನಡೆಯುತ್ತಿರಬೇಕು, ನೀರು ನಿಲ್ಲಬೇಕೆಂಬ ಆಕಾಂಕ್ಷೆಯನ್ನಿಟ್ಟುಕೊAಡಿದ್ದು, ಅದಕ್ಕಾಗಿ ದೊಡ್ಡದಾದ ಪ್ರಾಜೆಕ್ಟ್ನ್ನು ಮಾಡಿ ಹಿಂದಿನ ಸರ್ಕಾರ ಹಾಗೂ ಈಗೀನ ಸರ್ಕಾರದೊಂದಿಗೂ ನೇರ ಸಂಪರ್ಕದಲ್ಲಿದ್ದು, ಇನ್ನು ಎರಡು-ಮೂರು ತಿಂಗಳೊಳಗಾಗಿ ಆ ಯೋಜನೆಯು ಯಶಸ್ಸುಗೊಳ್ಳುವ ನಂಬಿಕೆಯಿದೆ ಎಂದ ಅವರು ಈ ಕಡಲಕೆರೆಯ ಬಳಿಯೂ ಸುಸಜ್ಜಿತವಾದ ವಾಕಿಂಗ್ ಟ್ರಕ್ ಕೂಡ ಆಗಬೇಕಿದೆ ಎಂದು ತಿಳಿಸಿದರು.

ಇದಕ್ಕೂ ಮೊದಲು ಶಾಸಕ ಕೋಟ್ಯಾನ್ ಗಿಡ ನೆಟ್ಟು ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಪುರಸಭಾ ಹಿರಿಯ ಸದಸ್ಯ ಪಿ.ಕೆ ಥೋಮಸ್, ತಹಶೀಲ್ದಾರ್ ಶ್ರೀಧರ್ ಮುಂದಲಮನಿ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಪುರಸಭಾ ಮುಖ್ಯಾಧಿಕಾರಿ ಇಂದು ಎಂ, ರೋಟರಿ ಅಧ್ಯಕ್ಷ ನಾಗರಾಜ ಹೆಗ್ಡೆ, ನಝೀರ್ ಉಪಸ್ಥಿತರಿದ್ದರು.
ಅರಣ್ಯಾಧಿಕಾರಿ ಶ್ರೀಧರ್ ಕಾರ್ಯಕ್ರಮ ನಿರ್ವಹಿಸಿದರು.