ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್‌ ‘ಛಾಯಾ ಟ್ರೋಫಿ’ ಮೂಡುಬಿದಿರೆ ಪ್ರಥಮ, ಕಾರ್ಕಳ ದ್ವಿತೀಯ

0
5

ಕಾರ್ಕಳ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಕಾರ್ಕಳ ವಲಯದ ವತಿಯಿಂದ, ಅವಿಭಜಿತ ಜಿಲ್ಲೆಯ 14 ವಲಯಗಳಿಗಾಗಿ ಛಾಯಾ ಟ್ರೋಫಿ 2026 ರನ್ನು ಕಾರ್ಕಳದ ಗಾಂಧೀ ಮೈದಾನದಲ್ಲಿ ನೆರವೇರಿಸಲಾಯಿತು. ಈ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಜಿಲ್ಲೆಯ ಸುಮಾರು 12 ವಲಯಗಳ ತಂಡ ಭಾಗಿಯಾಗಿದ್ದು, ಕ್ರಿಕೆಟ್ ಮತ್ತು ಹಗ್ಗಜ ಗ್ಲಾಟಕ್ಕೆ ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನವನ್ನು ನೀಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಮುನಿಯಾಲು, ಜಿಲ್ಲಾ ಮಟ್ಟದ ಈ ಸ್ಪರ್ಧೆಯು ಛಾಯಾಚಿತ್ರಗ್ರಾಹಕರ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಒಂದು ಉತ್ತಮ ವೇದಿಕೆಯಾಗಿದೆ ಅಲ್ಲದೇ ಉಭಯ ಜಿಲ್ಲೆಯ ಸಂಘಟನೆ ಜಿಲ್ಲೆ ಎರಡಾದರೂ ಸಂಘಟನೆಯು ಒಂದೇ ಆಗಿರುವುದು ಶ್ಲಾಘನೀಯ ಎಂದರು. ವೇದಿಕೆಯಲ್ಲಿ ಅಧ್ಯಕ್ಷತೆಯನ್ನು ಎಸ್. ಕೆ. ಕಾರ್ಕಳ ವಲಯ ಅಧ್ಯಕ್ಷ ಪಿ. ಎ ಪ್ರಮೋದ್ ಚಂದ್ರ ಪೈ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ, ದ. ಕ ಮತ್ತು ಉಡುಪಿ ಜಿಲ್ಲೆ ಎಸ್‌ಕೆಪಿಎ ಜಿಲ್ಲಾಧ್ಯಕ್ಷ ನವೀನ್ ರೈ ಪಂಜಳ, ಮಿಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತಾರಾನಾಥ್ ಕೋಟ್ಯಾನ್ ಸೂರಾಲು, ಯುವ ವಾಹಿನಿ ಕಾರ್ಕಳ ಘಟಕ ಅಧ್ಯಕ್ಷ ಪ್ರಕಾಶ್ ಪೂಜಾರಿ ಕೆರ್ವಾಸೆ, ದ.ಕ. ಮತ್ತು ಉಡುಪಿ ಜಿಲ್ಲೆ ಎಸ್‌ಕೆಪಿಎ ಪ್ರಧಾನ ಕಾರ್ಯದರ್ಶಿ ಅಜಯ್ ಮಂಗಳೂರು, ದತ್ತಾತ್ರೇಯ ಜಿಲ್ಲಾ ಉಪಾಧ್ಯಕ್ಷರು ಎಸ್.ಕೆ.ಪಿ.ಎ. ದ.ಕ. ಮತ್ತು ಉಡುಪಿ ಜಿಲ್ಲೆ, ಹರೀಶ್ ಕುಂದರ್ ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಎಸ್. ಕೆ. ಪಿ.ಎದ. ದ.ಕ. ಉಡುಪಿ ಜಿಲ್ಲೆ ವೃಷಭ ರಾಜ್ ಕಡಂಬ ಕೇರ್ತಡಿ ಗುತ್ತು ಕುಕ್ಕುಂದೂರು, ಸಂತೋಷ್ ಜೈನ್ ರೆಂಜಾಳ, ಸುಶೀಲ್ ಕುಮಾರ್ ಟಿ ವಿ ಗೌರವಾಧ್ಯಕ್ಷರು, ಶೇಖರ್ ಕುಕ್ಕುಜೆ ಪ್ರಧಾನ ಕಾರ್ಯದರ್ಶಿ ಎಸ್. ಕೆ. ಪಿ.ಎ. ಕಾರ್ಕಳ ವಲಯ, ವಿ. ಆರ್ ಸತೀಶ್ ಆಚಾರ್ಯ ಕೋಶಾಧಿಕಾರಿ, ಸುಶಾಂತ್ ಕಿಯಾರ ಕ್ರೀಡಾ ಕಾರ್ಯದರ್ಶಿ ಮತ್ತು ಅಶ್ವತ್ ದೇವಾಡಿಗ ಜೊತೆ ಕ್ರೀಡಾ ಕಾರ್ಯದರ್ಶಿ ಉಪಸ್ಥಿತರಿದ್ದರು. ಹಿರಿಯರ ಕ್ರಿಕೆಟ್ ವಲಯದ ಹಿರಿಯ ಸದಸ್ಯರ ಕ್ರಿಕೆಟ್ ಪ್ರದರ್ಶನ ಪಂದ್ಯಾಟದಲ್ಲಿ ದತ್ತಾತ್ರೇಯ ಹಿರಿಯಂಗಡಿ ಇವರ ತಂಡವು ಪ್ರಥಮ ಸ್ಥಾನ ಪಡೆದು ಪ್ರಸಾದ್ ಐಸಿರ ಇವರ ತಂಡವು ದ್ವಿತೀಯ ಸ್ಥಾನ ಪಡೆಯಿತು. ಕ್ರಿಕೆಟ್‌ನಲ್ಲಿ ಪ್ರಥಮ ಸ್ಥಾನವನ್ನು ಮೂಡುಬಿದಿರೆ ತನ್ನದಾಗಿಸಿಕೊಂಡು ಕಾರ್ಕಳ ವಲಯವು ದ್ವಿತೀಯ ಸ್ಥಾನವನ್ನು ಪಡೆಯಿತು. ಅಲ್ಲದೆ ಹಗ್ಗಜಗ್ಗಾಟದಲ್ಲಿ ಬಂಟ್ವಾಳ ವಲಯವು ಪ್ರಥಮ ಸ್ಥಾನ ಪಡೆದು ಕಾರ್ಕಳ ವಲಯವು ದ್ವಿತೀಯ ಪ್ರಶಸ್ತಿ ಬಾಚಿಕೊಂಡಿತು.

LEAVE A REPLY

Please enter your comment!
Please enter your name here