ಮೂಡುಬಿದಿರೆ : ಸಂದೇಹಾಸ್ಪದವಾಗಿ ಮಹಿಳೆ ಸಾವು

0
28

ಮೂಡುಬಿದಿರೆ : ತಲೆಗೆ ಏಟು ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೋರ್ವರು ಮಂಗಳವಾರ ರಾತ್ರಿ ಮೃತಪಟ್ಟಿದ್ದು ಇದು ಸಂಶಯಾಸ್ಪದ ಸಾವು ಎಂದು ಸಂಬಂಧಿಕರು ಭಾವಿಸಿದ್ದಾರೆ.

ವಿದ್ಯಾಗಿರಿಯ ನಿವಾಸಿ ದಿನೇಶ್ ಎಂಬವರ ಪತ್ನಿ ಕವಿತಾ ಮೃತಪಟ್ಟ ಆಕೆ, ಕವಿತಾ ಅವರು ಎರಡು ದಿನಗಳ ಹಿಂದೆ ತಲೆಗೆ ಏಟು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದು,ಆಕೆಯ ಗಂಡ ದಿನೇಶ್ ಪ್ರತಿದಿನ ಆಕೆಗೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದ ಇದೀಗ ಕೂಡಾ ಈ ಸ್ಥಿತಿಗೆ ಆತನೇ ಕಾರಣ ಎಂದು ಆರೋಪಿಸಿ ಮಹಿಳೆಯ ಸಂಬಂಧಿಕರು ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದರು.

ಆದರೆ ಆಕೆಯ ಗಂಡ ಮತ್ತು ಇಬ್ಬರು ಹೆಣ್ಣು ಮಕ್ಕಳು ಬಿದ್ದು ಗಂಭೀರ ಗಾಯಗೊಂಡಿದ್ದರು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ದಿನೇಶ್ ಅವರು ಲ್ಯಾಂಡ್ ವ್ಯವಹಾರ ನಡೆಸುತ್ತಿದ್ದು, ಕವಿತಾ ಅವರ ತಾಯಿ ಕೂಡಾ ಇವರ ಜತೆಯಲ್ಲೇ ಇದ್ದು ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದರು.

ಒಟ್ಟಾರೆಯಾಗಿ ಈ ಸಾವಿನ ಬಗ್ಗೆ ಕವಿತಾ ಅವರ ಸಂಬಂಧಿಕರು ಮತ್ತು ಮನೆಯ ಸಮೀಪದವರು ಸಂಶಯ ವ್ಯಕ್ತ ಪಡಿಸಿದ್ದಾರೆ.

LEAVE A REPLY

Please enter your comment!
Please enter your name here