ಮೂಡುಬಿದರೆ ಗಣೇಶೋತ್ಸವ; ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

0
38

ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆಯುತ್ತಿರುವ 62ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಅಗಸ್ಟ್ 27ರಂದು ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಜೀವನ್ ರಾಮ್ ಸುಳ್ಯ ಅವರು ಮಾತನಾಡಿ ಮಕ್ಕಳಿಗೆ ಪ್ರೀತಿಯ ರೂಪದ ಆಕರವಾದ ಗಣಪ ಚಿತ್ರ ಬಿಡಿಸಲು ಸ್ಪೂರ್ತಿ. ಯಕ್ಷಗಾನ, ಹಾಡು, ಭಜನೆ ಎಲ್ಲದರ ಪ್ರಾರಂಭವೂ ಗಣಪನಿಂದಲೇ, ಅಂತ್ಯವೂ ಗಣಪನಿಂದಲೇ ಎನ್ನುವುದು ಬಹಳ ವಿಚಿತ್ರ ವಾದರೂ ಸತ್ಯ. ಪ್ರಕೃತಿಯೊಂದಿಗೆ ಪ್ರಕೃತಿಯನ್ನೇ ಮೈವೆತ್ತ ಗಣಪನ ಉತ್ಸವದ ಸಂದರ್ಭದಲ್ಲಾದರೂ ಎಲ್ಲಾ ವಿಧದ ಕಲಾವಿದರಿಗೆ ಬದುಕು ಕಟ್ಟಿಕೊಳ್ಳಲು ಸಾಕಷ್ಟು ಅವಕಾಶವನ್ನು ಭಗವಂತ ಮಾಡಿಕೊಡಲಿ ಎಂದು ಅಪೇಕ್ಷಿಸಿದರು. ತಂದೆ ತಾಯಿಯೇ ವಿಶ್ವ ಎಂದು ತೋರಿದ ಶತಾವತಾರಿ ಗಣಪನಿಂದ ಎಲ್ಲರಿಗೂ ಪ್ರೇರಣೆ ದೊರಕಲಿ ಎಂದು ಹಾರೈಸಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ವೃತ್ತ ನಿರೀಕ್ಷಕ ಸಂದೇಶ ಪಿ ಜಿ ಅಚ್ಚುಕಟ್ಟಾದ ಕಾರ್ಯಕ್ರಮ ನಡೆಸಿರುವುದು ಮಾದರಿ ದಾಯಕ ಎಂದು ಪ್ರಶಂಸಿಸಿದರು. ಮಕ್ಕಳನ್ನು ಭಕ್ತಿ, ಸಂಸ್ಕಾರದೊಂದಿಗೆ ಬೆಳೆಸಲು ಪುರಸಭಾ ಮುಖ್ಯಾಧಿಕಾರಿ ಇಂದು ಎಸ್ ಕೇಳಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷ ನಾರಾಯಣ ಪಿಎಂ ಊರಿನ ಹಬ್ಬವಾಗಲು ಸಹಕರಿಸಿದ ಪುರಸಭೆಗೆ ಧನ್ಯವಾದ ಸಲ್ಲಿಸಿದರು. ಯತಿರಾಜ ಸ್ವಾಗತಿಸಿದರು. ಹರೀಶ್ ಎಂ ಕೆ ಕಾರ್ಯಕ್ರಮ ನಿರ್ವಹಿಸಿದರು. ಲಕ್ಷ್ಮಣ ಪೂಜಾರಿ ಧನ್ಯವಾದ ಸಲ್ಲಿಸಿದರು.

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here