ಮೂಡುಬಿದಿರೆ ಗಣೇಶೋತ್ಸವ ಜಾನಪದ ನೃತ್ಯ ಸ್ಪರ್ಧೆ: ರೋಟರಿ ವಿದ್ಯಾಸಂಸ್ಥೆ ಶಿಕ್ಷಕರ ತಂಡ ಪ್ರಥಮ

0
161

ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಮೂಡುಬಿದಿರೆ ಇವರು ನಡೆಸುವ ಸಾರ್ವಜನಿಕ ವಿಭಾಗದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಕರ್ನಾಟಕ ಯುವರತ್ನ ಪ್ರಶಸ್ತಿ, ಕರ್ನಾಟಕ ಸೇವಾ ರತ್ನ ಬೆಳ್ಳಿ ಪದಕ ಪ್ರಶಸ್ತಿ ವಿಜೇತ, ಶಿಕ್ಷಕರಾದ ಮೋಹನ್ ಹೊಸ್ಮಾರ್ ಇವರ ನಿರ್ದೇಶನದ ರೋಟರಿ ವಿದ್ಯಾಸಂಸ್ಥೆಗಳು ಮೂಡುಬಿದಿರೆಯ ಶಿಕ್ಷಕರ ತಂಡವು ಪ್ರಥಮ ಸ್ಥಾನವನ್ನು ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಸಂಸ್ಥೆಯ ಮುಖ್ಯೋಪಾಧ್ಯಾಯಿನಿಯವರಾದ ತಿಲಕಾ ಅನಂತವೀರ ಜೈನ್ ಇವರ ಮಾರ್ಗದರ್ಶನದಲ್ಲಿ ಶಿಕ್ಷಕರ ನೃತ್ಯ ತಂಡವು ಭಾಗವಹಿಸಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ನೃತ್ಯ ತಂಡದಲ್ಲಿ ಸ್ಟೇಟ್ ವಿಭಾಗದಿಂದ ಭವಿಷ್ಯ, ಶ್ರೀಲತಾ , ಕಾವ್ಯ, ಇಂದಿರಾ, ಮಾನಸಾ, ಸೌಮ್ಯ, ಸಿಬಿಎಸ್ ಇ ವಿಭಾಗದಿಂದ ಶ್ರೀಲತಾ, ಪೃಥ್ವಿ, ಮರ್ಸಿನ್, ಹರಿಶ್ಚಂದ್ರ ಹಾಗೂ ನೃತ್ಯ ನಿರ್ದೇಶಕ ಮೋಹನ್ ಸ್ಪರ್ಧಿಸಿದರು. ಹಿಮ್ಮೇಳದಲ್ಲಿ ಗೌರವ ಡಾಕ್ಟರೇಟ್ ವಿಜೇತ ಡಾ. ಪಾಡುರಂಗ, ವೈಭವ್, ಸಾತ್ವಿಕ್, ವರ್ಷಿಲ್, ಹರ್ಷ ಸಹಕರಿಸಿದರು. ಸ್ಪರ್ಧೆಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 30/8/2025 ಶನಿವಾರದಂದು ಸಮಾಜ ಮಂದಿರದಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here