ಮುದ್ರಾಡಿ ಅಭಯಹಸ್ತೆ ಆದಿಶಕ್ತಿ ದೇವಾಲಯದ ಧರ್ಮಾಧಿಕಾರಿ ಸುಕುಮಾರ್ ಮೋಹನ್ ಅವರ ತಾಯಿ ಮಾತೆ ಕಮಲಮ್ಮ( 73) ಅವರು ಮಂಗಳವಾರ ನಿಧನರಾಗಿದ್ದಾರೆ. ಮುದ್ರಾಡಿ ಕ್ಷೇತ್ರದ ಸಂಸ್ಥಾಪಕ ಧರ್ಮಯೋಗಿ ಮೋಹನ್ ಸ್ವಾಮೀಜಿಯವರ ಧರ್ಮಪತ್ನಿಯಾಗಿರುವ ಮಾತೆ ಕಮಲಮ್ಮ ಕ್ಷೇತ್ರದ ಅಭಿವೃದ್ಧಿಯಲ್ಲಿ ಸದಾಕಾಲವೂ ಮಾರ್ಗದರ್ಶಕರಾಗಿದ್ದರು. ಮೃತರಿಗೆ ಧರ್ಮಾಧಿಕಾರಿ ಸುಕುಮಾರ್ ಮೋಹನ್ ಸ್ವಾಮೀಜಿ ಸಹಿತ ಮೂವರು ಪುತ್ರರು, ಒರ್ವ ಪುತ್ರಿ ಇದ್ದಾರೆ.