ಕಾರ್ಕಳ: ದಿನಾಂಕ 02/08/2025 ರಂದು ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದ ಬಾಲ ಮಂದಿರದ ವಿದ್ಯಾರ್ಥಿಗಳಿಗೆ ಅಮ್ಮ ಮತ್ತು ನಾನು ಎಂಬ ಶೀರ್ಷಿಕೆಯ ಅಡಿಯಲ್ಲಿ ತಾಯಂದಿರ ದಿನಾಚರಣೆಯನ್ನು ಆಚರಿಸಲಾಯಿತು. ಎಲ್ಲಾ ತಾಯಂದಿರನ್ನು ಭಾರತೀಯ ಸಂಸ್ಕೃತಿಯಂತೆ ಅರಿಶಿನ ಕುಂಕುಮ ನೀಡುವ ಮೂಲಕ ಸ್ವಾಗತಿಸಲಾಯಿತು. ಯುಕೆಜಿ ಪುಟಾಣಿಗಳಿಂದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಶಾಲಾ ಪ್ರಾಂಶುಪಾಲರು ಹಾಗೂ ಮಕ್ಕಳ ತಾಯಂದಿರು ದೀಪ ಬೆಳಗಿಸುವ ಮೂಲಕ ವಿದ್ಯುಕ್ತವಾಗಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್ ಕಾಮತ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಯಂದಿರು ಹಾಗೂ ಮಕ್ಕಳಿಗಾಗಿ ಹಸ್ತ ಚಿಹ್ನೆ ಚಟುವಟಿಕೆ, ತಾಯಿ ಮಗುವಿನ ನಡುವೆ ಸಂಬಂಧ ಬೆಸೆಯುವ ಚಟುವಟಿಕೆ, ಎಲ್ ಕೆ ಜಿ ಮಕ್ಕಳ ತಾಯಂದಿರ ಜೊತೆಗಿನ ವಿಡಿಯೋ ವೀಕ್ಷಣೆ, ಚಿತ್ರ ಬಿಡಿಸಿ ಬಣ್ಣ ಹಚ್ಚುವುದು, ಹಾಗೂ ಹಲವಾರು ವಿವಿಧ ಮೋಜಿನ ಆಟಗಳನ್ನು ಆಡಿಸಲಾಯಿತು. ಎಲ್ಲಾ ತಾಯಂದಿರು ಹಾಗೂ ಮಕ್ಕಳು ಬಹಳ ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಇನ್ನಷ್ಟು ಅಂದಗಾಣಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಎಲ್ ಕೆ ಜಿ ಹಾಗೂ ಯು ಕೆ ಜಿ ಪುಟಾಣಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್ ಕಾಮತ್ , ಸಂಯೋಜಕರಾದ ಶ್ರೀಮತಿ ಚಿತ್ರ ಶೆಣೈ, ಶಿಕ್ಷಕ ವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀಮತಿ ಸುಲಕ್ಷಣ ಪುರಾಣಿಕ್ ಹಾಗೂ ಶ್ರೀಮತಿ ಚಿತ್ರ ಶೆಣೈ ನಿರೂಪಿಸಿದರು.