ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ ಆಟೋ 2026 ರ ಲೋಗೋ ಬಿಡುಗಡೆ ಹಾಗೂ ಸನ್ಮಾನ ಕಾರ್ಯಕ್ರಮ ಡಿಸೆಂಬರ್ 7ರಂದು ನಡೆಯಿತು. ಭಾರತದ ಮೋಟಾರ್ ರ್ಯಾಲಿಯಲ್ಲಿ ಹೆಸರುವಾಸಿಯಾಗಿರುವ ಮೂಡುಬಿದಿರೆಯ ಮೂಸಾ ಶರೀಫ್ ಹಾಗೂ ಕೂರ್ಗ ರ್ಯಾಲಿಯಲ್ಲಿ ಹೆಸರು ಪಡೆದ ಚಿರಂತ್ ಜೈನ ಅವರನ್ನು ಸಮ್ಮಾನಿಸಲಾಯಿತು. ಹಾಗೆ ಜನವರಿ 3 ಮತ್ತು 4ರಂದು ನಡೆಯಲಿರುವ ಆಟೋ 2026ರ ಲೋಗೋವನ್ನು ಕೂಡ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅರಮನೆಯ ಕುಲದೀಪ್ ಎಂ, ಪ್ರತಾಪ್, ವಿವೇಕ್ ಆಳ್ವ, ಇಮ್ರಾನ್, ಅಕ್ಷಯ್ ಜೈನ್, ಅಶ್ವಿನ್ ನಾಯಕ್, ಅಬುಲ್ ಅಲಾ, ಹಾಗೂ ಸಿಎಚ್ ಗಫೂರ್ ಹಾಜರಿದ್ದರು.


