ಮಂಗಳೂರು, 21 ಜನವರಿ 2026 : ಭಾರತದ ಅಂತರರಾಷ್ಟ್ರೀಯ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡಾ ಇಂದು ಭಾರತ ಇನ್ಫ್ರಾಸ್ಟ್ರಕ್ಚರ್ ಫೈನಾನ್ಸ್ ಕಂಪನಿ ಲಿಮಿಟೆಡ್ (IIFCL) ಜೊತೆಗೆ ಒಪ್ಪಂದ ಪತ್ರಕ್ಕೆ (MoU) ಸಹಿ ಮಾಡಿರುವುದಾಗಿ ಪ್ರಕಟಿಸಿದೆ. ಈ ಒಪ್ಪಂದದ ಮೂಲಕ ವಿವಿಧ ಸಾಧ್ಯತೆಯ ಮೂಲಸೌಕರ್ಯ ಯೋಜನೆಗಳಿಗೆ ಸಂಯುಕ್ತ ಸಾಲ ವಿತರಣೆ ಮತ್ತು ಸಾಲ ಸಿಂಡಿಕೇಶನ್‌ನ್ನು ಸುಗಮಗೊಳಿಸಲಾಗುತ್ತದೆ. ಈ ಸಹಭಾಗಿತ್ವವು ಭಾರತದಲ್ಲಿ ಸ್ಥಾಪನೆಯಾಗುತ್ತಿರುವ ಪ್ರಮುಖ ಮೂಲಸೌಕರ್ಯ ಯೋಜನೆಗಳ ಬೆಳವಣಿಗೆಯನ್ನು ವೇಗಗೊಳಿಸಲಿದೆ.
ಈ ಎಂಒಯುವಿಗೆ ಐಐಎಫ್‌ಸಿಎಲ್‌ನ ಉಪ ವ್ಯವಸ್ಥಾಪಕ ನಿರ್ದೇಶಕರಾದ ಪಲಾಶ್ ಶ್ರೀವಾಸ್ತವ ಮತ್ತು ಬ್ಯಾಂಕ್ ಆಫ್ ಬರೋಡಾದ ಕಾರ್ಯನಿರ್ವಾಹಕ ನಿರ್ದೇಶಕರಾದ ಲಲಿತ್ ತ್ಯಾಗಿ ಅವರ ಸಮ್ಮುಖದಲ್ಲಿ ಸಹಿ ಮಾಡಲಾಯಿತು. ಒಪ್ಪಂದದಡಿಯಲ್ಲಿ, ಐಐಎಫ್‌ಸಿಎಲ್ ಮತ್ತು ಬ್ಯಾಂಕ್ ಆಫ್ ಬರೋಡಾ ಸ್ಥಾಪಿತ ಹಾಗೂ ಉದಯೋನ್ಮುಖ ಕ್ಷೇತ್ರಗಳಾದ್ಯಂತ ವಿವಿಧ ಮೂಲಸೌಕರ್ಯ ಯೋಜನೆಗಳಿಗೆ ತಮ್ಮ ತಮ್ಮ ಬಲಗಳು ಮತ್ತು ಪರಿಣತಿಯನ್ನು ಬಳಸಿಕೊಂಡು ಸಂಯುಕ್ತವಾಗಿ ಹಣಕಾಸು ಒದಗಿಸಲು ಸಹಕರಿಸಲಿವೆ.
ಎಂಒಯು ಕುರಿತು ಪ್ರತಿಕ್ರಿಯಿಸಿದ ಐಐಎಫ್‌ಸಿಎಲ್‌ನ ಉಪ ವ್ಯವಸ್ಥಾಪಕ ನಿರ್ದೇಶಕರಾದ ಪಲಾಶ್ ವಾಸ್ತವ ಅವರು, “ಬ್ಯಾಂಕ್ ಆಫ್ ಬರೋಡಾ ಜೊತೆಗಿನ ಈ ಸಹಭಾಗಿತ್ವವು ಅಭಿವೃದ್ಧಿ ಮತ್ತು ಮೂಲಸೌಕರ್ಯ ಹಣಕಾಸಿಗಾಗಿ ಪರಿಸರ ವ್ಯವಸ್ಥೆ ಸುಗಮಗೊಳಿಸುವ ಸಂಸ್ಥೆಯಾಗಿ ಐಐಎಫ್‌ಸಿಎಲ್‌ನ ಪಾತ್ರದ ಸಹಜ ವಿಸ್ತರಣೆ ಆಗಿದೆ. ಸಾಮಾನ್ಯ ಆಸಕ್ತಿಯ ವಿಷಯಗಳಲ್ಲಿ ಬ್ಯಾಂಕ್ಗಳು, ಎನ್ಬಿಎಫ್ಸಿ-ಐಎಫ್‌ಸಿಗಳು ಹಾಗೂ ಇತರೆ ಹಣಕಾಸು ಸಂಸ್ಥೆಗಳ ನಡುವೆ ಸಹಕಾರಿ ವೇದಿಕೆಗಳನ್ನು ನಿರ್ಮಿಸುವುದು ಇದರ ಉದ್ದೇಶ. ಭಾರತ ಅಮೃತ ಕಾಲದ ಮೂಲಕ ಸಾಗುತ್ತಿರುವ ಸಂದರ್ಭದಲ್ಲಿ, ಹಸಿರು ಹಣಕಾಸು, ಎಂಎಸ್ಎಂಇಗಳು ಮತ್ತು ಗ್ರಾಮೀಣ ಮೂಲಸೌಕರ್ಯಗಳಿಗೆ ವಿಶೇಷ ಒತ್ತು ನೀಡಿ, ದೀರ್ಘಕಾಲೀನ ಮತ್ತು ಸ್ಥಿರ ಹಣಕಾಸು ಒದಗಿಸುವ ಮೂಲಕ ರಾಷ್ಟ್ರೀಯ ಗುರಿಗಳನ್ನು ಸಾಧಿಸಲು ಐಐಎಫ್‌ಸಿಎಲ್ ಸಕ್ರಿಯವಾಗಿ ಬೆಂಬಲಿಸುತ್ತಿದೆ. ಇದರಿಂದ ಸಮಾವೇಶಕಾರಿ ಮತ್ತು ಸ್ಥಿರ ಆರ್ಥಿಕ ಬೆಳವಣಿಗೆಗೆ ಉತ್ತೇಜನ ಸಿಗಲಿದೆ” ಎಂದು ಹೇಳಿದರು.
ಬ್ಯಾಂಕ್ ಆಫ್ ಬರೋಡಾದ ಕಾರ್ಯನಿರ್ವಾಹಕ ನಿರ್ದೇಶಕರಾದ ಲಲಿತ್ ತ್ಯಾಗಿ ಅವರು, “ಬ್ಯಾಂಕ್ ಆಫ್ ಬರೋಡಾಗೆ ದೇಶವ್ಯಾಪಿ ವ್ಯಾಪಕ ಹಾಜರಾತಿ ಇದೆ. ಐಐಎಫ್‌ಸಿಎಲ್ ಜೊತೆಗಿನ ಈ ಸಹಭಾಗಿತ್ವವು ನಮ್ಮ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ಭಾರತದ ಮೂಲಸೌಕರ್ಯ ಆಶಯಗಳನ್ನು ಬೆಂಬಲಿಸುವ ನವೀನ ಹಣಕಾಸು ಪರಿಹಾರಗಳನ್ನು ಒದಗಿಸಲು ನಮ್ಮನ್ನು ಉತ್ತಮವಾಗಿ ಸಿದ್ಧಪಡಿಸುತ್ತದೆ. ನಮ್ಮ ಬಲಗಳು ಮತ್ತು ಸಂಪನ್ಮೂಲಗಳನ್ನು ಒಟ್ಟುಗೂಡಿಸುವ ಮೂಲಕ, ಗ್ರಾಹಕರಿಗೆ ಸೇವೆ ಸಲ್ಲಿಸುವುದನ್ನು ಮುಂದುವರಿಸಿ ಆತ್ಮನಿರ್ಭರ್ ಭಾರತ ಹಾಗೂ ದೀರ್ಘಕಾಲೀನ ಆರ್ಥಿಕ ಬೆಳವಣಿಗೆಯ ದೃಷ್ಟಿಕೋನಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡುತ್ತೇವೆ ಎಂಬ ವಿಶ್ವಾಸ ನಮಗಿದೆ” ಎಂದು ಹೇಳಿದರು.

