ಕಾರ್ಕಳದ ಎಂಪಿಎಂ ಸರ್ಕಾರಿ ಪ್ರಥಮದರ್ಜೆಕಾಲೇಜಿನಲ್ಲಿ 2025–26ನೇ ಶೈಕ್ಷಣಿಕ ವರ್ಷದ ವೃತ್ತಿ ಮಾರ್ಗದರ್ಶನ ಮತ್ತು ನೇಮಕಾತಿ ಕೋಶದ ಉದ್ಘಾಟನೆ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ 90 ಗಂಟೆಗಳ ಸಾಫ್ಟ್ ಸ್ಕಿಲ್ಸ್ ಅಭಿವೃದ್ಧಿ ಪ್ರಮಾಣ ಪತ್ರ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಉದ್ಘಾಟಿಸಲಾಯಿತು.
ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್‌ರೈ ಕೆ ಅವರು ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳು ಕಾಲೇಜಿನಲ್ಲಿ ನೀಡುವಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉಪಯೋಗಗಳನ್ನು ಪಡೆಯಬೇಕೆಂದು ಹೇಳಿದರು ಹಾಗೂ 90 ಗಂಟೆಗಳ ತರಬೇತಿಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ಸಂವಹನ ಕೌಶಲ್ಯ, ನಾಯಿಕತ್ವ, ತಂಡದಲ್ಲಿ ಕೆಲಸ ಮಾಡುವ ತಂತ್ರಗಳು, ಸಮಯ ನಿರ್ವಹಣೆ, ಸಂದರ್ಶನ ತಂತ್ರಗಳು ಮುಂತಾದ ಕ್ಷೇತ್ರಗಳಲ್ಲಿ ತರಬೇತಿ ಪಡೆದು, ಮುಂದಿನ ಜೀವನದಲ್ಲಿ ಅಡವಳಿಸಿಕೊಳ್ಳಬೇಕೆಂದು ಹೇಳಿದರು. ನೇಮಕಾತಿ ಕೋಶದ ಸಂಯೋಜಕರು ಹಾಗೂ ನಿರ್ವಹಣಾ ಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದಡಾ. ಸುಬ್ರಹ್ಮಣ್ಯ ಕೆ.ಸಿ. ಅವರುಅತಿಥಿಗಳನ್ನುಸ್ವಾಗತಿಸಿದರು.
ಮುಖ್ಯ ಅತಿಥಿಯಾಗಿ ಕಾಲೇಜಿನ ಹೆಮ್ಮೆಯ ಹಳೆಯ ವಿದ್ಯಾರ್ಥಿನಿ ಮತ್ತು ಚಾರ್ಟರ್ಡ್ಅ ಕೌಂಟೆಂಟ್ ಸಿ.ಎ. ವರ್ಶಾ ಶೆನಾಯ್. ಅವರುತಮ್ಮಉದ್ಯೋಗ ಅನುಭವಗಳನ್ನು ಹಂಚಿಕೊಂಡು ವಿದ್ಯಾರ್ಥಿಗಳಿಗೆ ವೃತ್ತಿಪರ ಜೀವನದ ಅಗತ್ಯ ಕೌಶಲ್ಯಗಳ ಬಗ್ಗೆ ಪ್ರೇರಣಾದಾಯಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀಗುರುಪ್ರಸಾದ್ ಮತ್ತುರೇಷ್ಮಾ ಅವರು “ಚೇಂಜ್‌ಮೇಕರ್” ತರಬೇತುದಾರರಾಗಿ ವಿದ್ಯಾರ್ಥಿಗಳಿಗೆ ಸಾಫ್ಟ್ಸ್ಕಿಲ್ಸ ತಬೇತಿಯನ್ನುನೀಡಲಿದ್ದಾರೆ.
ಪವಿತ್ರ, ದ್ವಿತೀಯ ಬಿಬಿಎ ಮತ್ತುತಂಡದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶಾರಣ್ಯ , ದ್ವಿತೀಯ ಬಿಬಿಎ ವಿದ್ಯಾರ್ಥಿನಿ ಅವರು ಅತಿಥಿಗಳನ್ನು ಪರಿಚಯಿಸಿದರು. ಮಾನ್ಯ ಶ್ರೀ, ದ್ವಿತೀಯ ಬಿಬಿಎ ವಿದ್ಯಾರ್ಥಿನಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಕಾವ್ಯ ಶೆಟ್ಟಿ, ದ್ವಿತೀಯ ಬಿಬಿಎ ಅವರು ಧನ್ಯವಾದ ಪ್ರಸ್ತಾಪಿಸಿದರು.
90 ಗಂಟೆಗಳ ತರಬೇತಿ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ಸಂವಹನ ಕೌಶಲ್ಯ, ನಾಯಿಕತ್ವ, ತಂಡದಲ್ಲಿ ಕೆಲಸ ಮಾಡುವ ತಂತ್ರಗಳು, ಸಮಯ ನಿರ್ವಹಣೆ, ಭಾವನಾತ್ಮಕ ಬುದ್ಧಿಮತ್ತೆ, ಸಂದರ್ಶನ ತಂತ್ರಗಳು ಮುಂತಾದ ಕ್ಷೇತ್ರಗಳಲ್ಲಿ ತರಬೇತಿ ಪಡೆಯಲಿದ್ದಾರೆ. ತರಬೇತಿ ಯಶಸ್ವಿಯಾಗಿ ಪೂರೈಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಗುವುದು.
ಈ ಕಾರ್ಯಕ್ರಮ ವಿದ್ಯಾರ್ಥಿಗಳ ಉದ್ಯೋಗಾರ್ಹತೆಯನ್ನು ಹೆಚ್ಚಿಸಿ, ನವೀನ ವೃತ್ತಿಪರ ಶಕ್ತಿಯಾಗಿ ಅವರನ್ನು ರೂಪಿಸುವ ಉದ್ದೇಶವನ್ನು ಹೊಂದಿದೆ.
Home Uncategorized ಕಾರ್ಕಳದ ಎಂಪಿಎಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ವೃತ್ತಿ ಮಾರ್ಗದರ್ಶನ ಮತ್ತು 90 ಗಂಟೆಗಳ ಸಾಫ್ಟ್...