ಎಮ್.ಆರ್.ಪಿ.ಎಲ್ – ಒ.ಎನ್.ಜಿ.ಸಿ ನಿ.ಉ.ಕ. ಸಂಘ: ಪುರಸ್ಕಾರ, ಸನ್ಮಾನ ಹಾಗೂ ನಿವೃತ್ತ ಉದ್ಯೋಗಿಗಳಿಗೆ ಅಭಿವಂದನೆ ಕಾರ್ಯಕ್ರಮ

0
18

,ಮಂಗಳೂರು: ಎಮ್.ಆರ್.ಪಿ.ಎಲ್ – ಒ.ಎನ್.ಜಿ.ಸಿ ನಿರ್ವಸಿತ ಉದ್ಯೋಗಿಗಳ ಕಲ್ಯಾಣ ಸಂಘ (ರಿ.) ವತಿಯಿಂದ ಕುಟುಂಬಗಳ 10 ಮತ್ತು 12 ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಸನ್ಮಾನ ಹಾಗೂ ನಿವೃತ್ತ ಉದ್ಯೋಗಿಗಳಿಗೆ ಅಭಿವಂದನೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆ.೩ರಂದು  ಎಂ.ಆರ್.ಪಿ.ಎಲ್ ಉದ್ಯೋಗಿಗಳ ರಿಕ್ರಿಯೇಷನ್ ಸಭಾಂಗಣದಲ್ಲಿ ಜರಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೂಲ್ಕಿ-ಮೂಡಬಿದ್ರಿ ಕ್ಷೇತ್ರದ ಶಾಸಕರಾದ ಉಮಾನಾಥ್ ಕೋಟ್ಯಾನ್ ರವರು ಸಂಘಟನೆಯ ಕಾರ್ಯಕ್ರಮವನ್ನು ಶ್ಲಾಘಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮಾಡಿದ ಅವರು ಎಮ್‌.ಆರ್‌.ಪಿ‌.ಎಲ್  ಸಂಸ್ಥೆಯು ಕಾರ್ಮಿಕರಿಗೆ ಕೊಡುವ ಸವಲತ್ತುಗಳನ್ನು ಸರಿಯಾಗಿ ನೀಡಬೇಕು ಎಂದು ಸಲಹೆ ನೀಡಿದರು. ಕಾರ್ಖಾನೆಗಳು ಬೇಕು, ಅದೇ ಪ್ರಕಾರ ಸ್ಥಳೀಯರಿಗೆ ಪ್ರಾಶಸ್ತ್ಯ ನೀಡಬೇಕೆಂದು ಅಗ್ರಹಿಸಿ, ಸ್ಥಳೀಯರ ನ್ಯಾಯೋಚಿತ ಹೋರಾಟಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರು ನಗರ ಉತ್ತರದ ಶಾಸಕ ಡಾ. ಭರತ್ ಶೆಟ್ಟಿ ವೈ ಅವರು ಕಾರ್ಯಕ್ರಮದ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಲ್ಲದೆ, ಎಂ.ಆರ್.ಪಿ.ಎಲ್ – ಒ.ಎನ್.ಜಿ.ಸಿ ನಿರ್ವಸಿತ ಉದ್ಯೋಗಿಗಳ ಕಲ್ಯಾಣ ಸಂಘ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕೆಂಬ ಸಲಹೆ ನೀಡಿದರು. 

ಮುಖ್ಯ ಅತಿಥಿ ಭಾರತೀಯ ವಾಯು ಸೇನೆಯ ನಿವೃತ್ತ ಸಾರ್ಜೆಂಟ್, ಶ್ರೀಕಾಂತ್ ಶೆಟ್ಟಿ ಬಾಳ ಇವರು ಮಾತನಾಡುತ್ತಾ, ಪ್ರಾಥಮಿಕ ಹಂತದಲ್ಲಿ ಎಮ್‌.ಆರ್‌.ಪಿ‌.ಎಲ್ ಸಂಸ್ಥೆಗೆ ಭೂ ಸ್ವಾಧೀನ ನಡೆಯುವ ಮುನ್ನ ಸ್ಥಳೀಯ ಗ್ರಾಮಸ್ಥರು ನಡೆಸುತ್ತಿದ್ದ ಸೌಹಾರ್ದಯುತ ನೆಮ್ಮದಿಯ ಜನಜೀವನವನ್ನು ಅವಲೋಕಿಸುತ್ತಾ, ಭೂ ಸ್ವಾಧೀನ ನಡೆದಾಗ ನಿರ್ವಸಿತರಿಗೆ ಆದ ಅನ್ಯಾಯ ಪ್ರಸ್ತಾಪಿಸಿ, ಎಮ್‌.ಆರ್‌.ಪಿ‌.ಎಲ್ ಸಂಸ್ಥೆ ನಿರ್ವಸಿತ ಉದ್ಯೋಗಿಗಳ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ವಿನಂತಿಸಿದರು.

ಮುಖ್ಯ ಅತಿಥಿ ಎಂ.ಆರ್.ಪಿ.ಎಲ್ ನ ನಿರ್ದೇಶಕರಾದ ನಂದಕುಮಾರ್ ವಿ ಪಿಳ್ಳೈ, ಅವರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಈ ಕಾರ್ಯಕ್ರಮವನ್ನು ಶ್ಲಾಘಿಸಿದರು.

ರೊನಾಲ್ಡ್ ಫೆರ್ನಾಂಡಿಸ್, ನಿವೃತ್ತ ಅಧ್ಯಾಪಕರು ಬಲ್ಮಟ ಕಾಲೇಜು ಮಂಗಳೂರು ಇವರು ನಿರ್ವಸಿತ ಕುಟುಂಬಗಳ ಕಷ್ಟ ಕಾರ್ಪಣ್ಯಗಳನ್ನು ವಿವರಿಸಿ, ಶಿಕ್ಷಣಕ್ಕಾಗಿ ನಿರ್ವಸಿತ ಕುಟುಂಬಗಳ ಎಲ್ಲಾ ಮಕ್ಕಳಿಗೆ ಎಮ್‌.ಆರ್‌.ಪಿ‌.ಎಲ್ ಸಂಸ್ಥೆ,  ವಿದ್ಯಾರ್ಥಿ ವೇತನ ನೀಡಬೇಕೆಂದು ವಿನಂತಿಸಿದರು. ವೇದಿಕೆಯಲ್ಲಿ ಬಾಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಂಕರ್ ಜೋಗಿ, ಎಂ.ಆರ್.ಪಿ.ಎಲ್ ಮಾನೇಜ್ಮೆಂಟ್ ಸ್ಟಾಫ್ ಅಸೋಸಿಯಶನ್ ಅಧ್ಯಕ್ಷ ಸಂಪತ್ ರೈ, ಉಪಾಧ್ಯಾಕ್ಷ್ಯ ಡಾ. ಸಂಪತ್, ಎಂ.ಆರ್.ಪಿ‌.ಎಲ್ ಯೂನಿಯನ್ ನ ಅಧ್ಯಕ್ಷ ಶರತ್ ಜೋಗಿ ಮುಂತಾದವರು ಉಪಸ್ಥಿತರಿದ್ದರು. 

ಕಾರ್ಯಕ್ರಮ ದಲ್ಲಿ ನಿರ್ವಸಿತ ಕುಟುಂಬಗಳ 10 ಮತ್ತು 12 ನೇ ತರಗತಿಯ ಒಟ್ಟು 60 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ನಿವೃತ್ತ ಉದ್ಯೋಗಿಗಳಾದ ಪುಷ್ಪರಾಜ್ ಅಡಪ್ಪ ಮತ್ತು ದಿಲೀಪ್ ಬಿ ಆಳ್ವ ಅವರನ್ನು ಅಭಿವಂದಿಸಿ, ಸನ್ಮಾನಿಸಲಾಯಿತು.

ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಭಗವದ್ಗೀತ ಸ್ಪರ್ಧೆಯಲ್ಲಿ ಪ್ರಥಮ ಪುರಸ್ಕಾರ ಪಡೆದ ಎಮ್‌.ಆರ್‌.ಪಿ‌.ಎಲ್ ಸಂಸ್ಥೆ  ಉದ್ಯೋಗಿ ವಿನಯ್ ಭಟ್, ಹತ್ತನೇ ತರಗತಿಯಲ್ಲಿ ರಾಜ್ಯ ಮಟ್ಟದಲ್ಲಿ ತೃತೀಯ ಸಾಧನೆಗೈದ ವಿದ್ಯಾರ್ಥಿ ಕುಮಾರಿ ಬಿಂದು ಎಂ ಸುವರ್ಣ, ಹಾಗೂ ಉತ್ತಮ ಸರಕಾರಿ ಮಹಿಳಾ ಉದ್ಯೋಗಿ ಎಂದು ರಾಷ್ಟ್ರ ಪ್ರಶಸ್ತಿ,  ಹಲವು ಬರವಣಿಗೆಗಳಿಂದ ರಾಜ್ಯ ಪ್ರಶಸ್ತಿ ವಿಜೇತ, ಖ್ಯಾತಿ ಪಡೆದ ಬರಹಗಾರ್ತಿ, ಪ್ರಮೀಳಾ ದೀಪಕ್ ಪೆರ್ಮುದೆ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಎಂ.ಆರ್.ಪಿ.ಎಲ್ – ಒ.ಎನ್.ಜಿ.ಸಿ ಯೋಜನಾ ನಿರ್ವಸಿತರಾಗಿದ್ದು, ಉದ್ಯೋಗ ಹೊಂದಿರದ, ಆರ್ಥಿಕ ದುರ್ಬಲರಾಗಿರುವ 05 ಕುಟುಂಬಗಳನ್ನು ಗುರುತಿಸಿ, ಅವರಿಗೆ ತಲಾ ಹತ್ತು ಸಾವಿರ ರೂ  ಆರ್ಥಿಕ ಸಹಾಯ ನೀಡಲಾಯಿತು.

ಎಮ್.ಆರ್.ಪಿ.ಎಲ್ – ಒ.ಎನ್. ಜಿ.ಸಿ ನಿರ್ವಸಿತ ಉದ್ಯೋಗಿಗಳ ಕಲ್ಯಾಣ ಸಂಘ (ರಿ), ಇದರ ಅಧ್ಯಕ್ಷ ದಿನೇಶ್ ಬಿ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಲಕ್ಷ್ಮೀಶ ಎಂ ಅಂಚನ್ ರವರು ವರದಿ ವಾಚನ ಗೈದರು.  ಜೊತೆ ಕಾರ್ಯದರ್ಶಿ  ಗುರುರಾಜ್ ಅವರು ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಎಂ.ಆರ್.ಪಿ.ಎಲ್ – ಒ.ಎನ್.ಜಿ.ಸಿ ನಿರ್ವಸಿತ ಕುಟುಂಬಗಳ 10 ಮತ್ತು 12 ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಲಾ ರೂ 05 ಸಾವಿರ ಪುರಸ್ಕಾರ ನೀಡಿದ ಎಮ್‌.ಆರ್‌.ಪಿ‌.ಎಲ್ ಸಂಸ್ಥೆಗೆ ಕೃತಜ್ನತೆ ಅರ್ಪಿಸಲಾಯಿತು. ಸುಧೀರ್ ಆಚಾರ್ಯ ವಂದನಾರ್ಪಣೆಗೈದರು. ಕಾರ್ಯಕ್ರಮದಲ್ಲಿ ಎಂ.ಆರ್.ಪಿ.ಎಲ್ – ಒ.ಎನ್.ಜಿ.ಸಿ ನಿರ್ವಸಿತ ಉದ್ಯೋಗಿಗಳ ಕಲ್ಯಾಣ ಸಂಘ (ರಿ), ಇದರ ಪದಾಧಿಕಾರಿಗಳಾದ ಹಾಗೂ ಸದಸ್ಯರಾದ ರಘುರಾಮ್ ತಂತ್ರಿ, ಜಯೇಶ್ ಗೋವಿಂದ್, ಜಯಪ್ರಕಾಶ್, ರಾಜ್ ಕುಮಾರ್, ದಾಮೋದರ್ ಶೆಟ್ಟಿ, ಕಿರಣ್ ಕುಮಾರ್,ಶಿವಾನಂದ, ಕುಮಾರ್ ಡಿ ಅಂಚನ್, ಪ್ರಸನ್ನ ಕುಮಾರ್, ರತನ್, ಕಿಶೋರ್ ಶೆಟ್ಟಿ, ಗಿರೀಶ್, ಗಂಗಾಧರ್, ಜಯಲಕ್ಷ್ಮಿ ಶೆಟ್ಟಿ ಸ್ಮಿತಾ ಭಂಡಾರಿ,ತೇಜೇಶ್, ಅವಿನಾಶ್ ,ಶರತ್ ಮುಂತಾದವರು ಉಪಸ್ಥಿತರಿದ್ದು ಸಹಕರಿಸಿದರು. ಶ್ರೀಶ ಎಂ. ಕರ್ಮರನ್ ಹಾಗೂ ಪ್ರಾರ್ಥನಾ ರವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here