ಪ್ರಭಾ ರವೀಂದ್ರರವರಿಗೆ ಕಲಾಕುಂಚದಿಂದ ಸನ್ಮಾನ

0
25

ದಾವಣಗೆರೆ: ಕಲಾಕುಂಚ ಎಂ.ಸಿ.ಸಿ. ಬ್ಲಾಕ್ ಶಾಖೆಯ ಅಧ್ಯಕ್ಷರಾದ ಪ್ರಭಾ ರವೀಂದ್ರರವರಿಗೆ ಇತ್ತೀಚಿಗೆ ದಾವಣಗೆರೆಯಲ್ಲಿ ನಡೆದ ಲಿಂ. ವಾಗೀಶ್ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ ಲಿಂಗೈಕ್ಯ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ ಸ್ಮರಣೋತ್ಸವ ಸಮಾರಂಭದಲ್ಲಿ ನಿರಂತರ ಆರು ದಶಕಗಳ ಕಾಲ ನಿರಂತರ ಸ್ವಯಂ ಪ್ರೇರಣೆಯಿಂದ ಸಮಾಜ ಸೇವೆಯನ್ನು ಗುರುತಿಸಿ “ಸಮಾಜ ಸೇವಾ ಭೂಷಣ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಲಾಕುಂಚ ಕಛೇರಿ ಹೊರಾಂಗಣದಲ್ಲಿ 70ನೇ ವರ್ಷದ ಕನ್ನಡ ರಾಜ್ಯೋತ್ಸವದ ಸಮಾರಂಭದಲ್ಲಿ ಸಿದ್ದವೀರಪ್ಪ ಬಡಾವಣೆಯ ಶಾಖೆಯ ಅಧ್ಯಕ್ಷರಾದ ಲಲಿತಾ ಕಲ್ಲೇಶ್‌ರವರು ಅಭಿಮಾನದಿಂದ ಅಭಿನಂದಿಸಿ ಸನ್ಮಾನಿಸಿ ಗೌರವಿಸಿದರು. ಕಲಾಕುಂಚ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ, ಕಲಾಕುಂಚದ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಜ್ಯೋತಿ ಗಣೇಶ್ ಶೆಣೈ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ, ಗೌರವ ಅಧ್ಯಕ್ಷರಾದ ವಸಂತಿ ಮಂಜುನಾಥ, ಕಲಾಕುಂಚ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್, ಸಮಿತಿ ಸದಸ್ಯರಾದ ಕೋಮಲಾ ವಸಂತಕುಮಾರ್, ಸಂಧ್ಯಾ ಶ್ರೀನಿವಾಸ್, ಸುಚಿತ್ರಾ ಗಣೇಶ್ ರಾವ್, ಶೈಲಜಾ ಪ್ರಶಾಂತ್, ಸುಮಾ ಏಕಾಂತಪ್ಪ, ರೇಣುಕಾ ರಾಮಣ್ಣ, ಎಂ.ಎಸ್.ಚನ್ನಬಸವ ಶೀಲವಂತ್, ಪೂರ್ಣಿಮಾ ಲೋಹಿತಾಶ್ವಬಾಬು ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here