ಬೆಳಕು ಸಂಸ್ಥೆಯ ವತಿಯಿಂದ ಸಾಹಿತ್ಯ-ಸಾಂಸ್ಕೃತಿಕ, ಸಂಗೀತ, ಕವಿಗೋಷ್ಟಿ ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ನೀಡುವ ಅನೇಕ ಪ್ರಶಸ್ತಿಗಳಲ್ಲಿ, ಬೆಳಕು ಸಂಸ್ಥೆ ವತಿಯಿಂದ ನಡೆದ ಕವನ ರಚನೆ ಸ್ಪರ್ಧೆಯಲ್ಲಿ ಕು. ಸರಸ್ವತಿ ಕೋಟೇಶ್ವರ ಇವರು ರಚಿಸಿದ ಕವನಕ್ಕೆ ದ.ರಾ.ಬೇಂದ್ರೆ ರಾಷ್ಟ್ರ ಪ್ರಶಸ್ತಿಯನ್ನು ದಿನಾಂಕ 30.11.2025 ರ ರವಿವಾರದಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿರುವ ಅಕ್ಕಮಹಾದೇವಿ ಸಭಾಂಗಣದಲ್ಲಿ 121ನೇ ರಾಷ್ಟ್ರಮಟ್ಟದ ಬೆಳಕು ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕಾರ ಮಾಡಲಾಯಿತು. ಇವರು ರಚಿಸಿದ ಕವನ ಬೆಳಕಿನ ಬುತ್ತಿ ಕವನ ಸಂಕಲನದಲ್ಲಿ ಪ್ರಕಟವಾಗಿರುತ್ತದೆ. ಇವರು ಫೈನಾನ್ಸ್ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಳಕು ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಅಣ್ಣಪ್ಪ ಮೇಟಿ ಗೌಡ ಹಾಗೂ ಎಲ್ಲಾ ಪಧಾದಿಕಾರಿಗಳು ಸೇರಿಕೊಂಡು ಈ ಅದ್ಭುತ ಕಾರ್ಯಕ್ರಮವನ್ನು ನೇರವೇರಿಸಿದರು.

