ಮಂಗಳೂರು : ಕಳೆದ ನಾಲ್ಕು ವರ್ಷಗಳಲ್ಲಿ ಒಳ್ಳೆಯ ಬೆಳವಣಿಗೆ ಸಾಧಿಸಿದ ನಂತರ ಮಹೀಂದ್ರ ಕಂಪನಿಯ ಟ್ರಕ್ ಮತ್ತು ಬಸ್ ವಹಿವಾಟು ಇಂದು ತನ್ನ ಅತ್ಯಾಧುನಿಕ 3ಎಸ್ ಡೀಲರ್‍ಶಿಪ್ ಅನ್ನು ಹುಬ್ಬಳ್ಳಿಯಲ್ಲಿ ಉದ್ಘಾಟಿಸುವ ಮೂಲಕ ರಾಜ್ಯದಲ್ಲಿ ತನ್ನ ಜಾಲವನ್ನು ಮತ್ತಷ್ಟು ಬಲಪಡಿಸಿದೆ.
ಇಲ್ಲಿ ದಿನವೊಂದಕ್ಕೆ ಏಳಕ್ಕಿಂತ ಹೆಚ್ಚು ವಾಹನಗಳ ದುರಸ್ತಿಗೆ ಅವಕಾಶ ಇದೆ. ಜತೆಗೆ ಚಾಲಕರಿಗೆ ವಸತಿ ಸೌಲಭ್ಯ, ವಾಹನ ಕೆಟ್ಟು ನಿಂತರೆ 24 ಗಂಟೆ ಸಹಾಯ ಒದಗಿಸುವ ಸೌಲಭ್ಯ, ವಿಷಕಾರಿ ಅನಿಲ ಉಗುಳುವುದನ್ನು ಕಡಿಮೆ ಮಾಡುವಲ್ಲಿ ನೆರವಾಗುವ ಆಡ್‍ಬ್ಲ್ಯೂ ಲಭ್ಯತೆಯೂ ಇಲ್ಲಿದೆ ಎಂದು ಕಾರ್ಯನಿರ್ವಾಹಕ ಮಂಡಳಿಯ ಸದಸ್ಯ ಹಾಗೂ ಟ್ರಕ್, ಬಸ್ ಮತ್ತು ನಿರ್ಮಾಣ ಉಪಕರಣಗಳ ವಿಭಾಗದ ಅಧ್ಯಕ್ಷ ವಿನಯ್ ಸಹಾಯ್ ಹೇಳಿದ್ದಾರೆ.

ಮಹೀಂದ್ರ ಟ್ರಕ್ಸ್ ಮತ್ತು ಬಸ್ ಹಾಗೂ ಎಸ್‍ಎಂಎಲ್ ಈಗ 200ಕ್ಕೂ ಹೆಚ್ಚು 3ಎಸ್ ಡೀಲರ್‍ಶಿಪ್‍ಗಳನ್ನು ಹೊಂದಿವೆ. ಅಲ್ಲದೆ, ಬಸ್ ಹಾಗೂ ಟ್ರಕ್‍ಗಳಿಗಾಗಿ 400ಕ್ಕೂ ಹೆಚ್ಚು ಎರಡನೆಯ ಹಂತದ ಸೇವಾ ಕೇಂದ್ರಗಳನ್ನು ದೇಶದಾದ್ಯಂತ ಹೊಂದಿವೆ. ಈ ಮೂಲಕ ನಮ್ಮ ಗ್ರಾಹಕರಿಗೆ ವಿಶ್ವದರ್ಜೆಯ ಸೇವೆಗಳನ್ನು ಒದಗಿಸಲಾಗುತ್ತಿದೆ. ಮಹೀಂದ್ರ ಸಮೂಹವು ಈಗ ಟ್ರಕ್ ಮತ್ತು ಬಸ್ ಮಾರುಕಟ್ಟೆಯಲ್ಲಿ ಸರಿಸುಮಾರು ಶೇಕಡ 7ರಷ್ಟು ಪಾಲನ್ನು ಹೊಂದಿದೆ. 2035-36ರ ಹೊತ್ತಿಗೆ ಅದನ್ನು ಶೇ 20ಕ್ಕೆ ಹೆಚ್ಚಿಸುವ ಗುರಿ ಹೊಂದಿದೇವೆ” ಎಂದು ವಿವರಿಸಿದ್ದಾರೆ.
ಮಹೀಂದ್ರ ಬ್ಲಾಜೊ ಎಕ್ಸ್, ಫ್ಯುರಿಯೊ, ಆಪ್ಟಿಮೊ ಮತ್ತು ಜಾಯೊ ಮಾದರಿಗಳು ಭಾರತದಲ್ಲಿ ಎರಡು ಬಗೆಯ ಸೇವಾ ಖಾತರಿಗಳನ್ನು ಹೊಂದಿರುವ ವಾಣಿಜ್ಯ ಬಳಕೆ ಟ್ರಕ್‍ಗಳಾಗಿವೆ. ಅಂದರೆ 48 ಗಂಟೆಗಳಲ್ಲಿ ಸೇವೆ ಪೂರ್ಣಗೊಂಡು ಟ್ರಕ್‍ಗಳು ಪುನಃ ರಸ್ತೆಯ ಮೇಲಿರುತ್ತವೆ. ಅದು ಸಾಧ್ಯವಾಗದಿದ್ದರೆ ಕಂಪನಿಯು ಗ್ರಾಹಕರಿಗೆ ಪ್ರತಿ ದಿನಕ್ಕೆ ರೂ 1,000 ಪರಿಹಾರ ನೀಡುತ್ತದೆ. ಡೀಲರ್ ವರ್ಕ್‍ಶಾಪ್‍ನಲ್ಲಿ ವಾಹನವು 36 ಗಂಟೆಗಳಲ್ಲಿ ಪೂರ್ಣವಾಗಿ ಸಿದ್ಧವಾಗುತ್ತದೆ, ಅದು ಸಾಧ್ಯವಾಗದೆ ಇದ್ದರೆ ಗ್ರಾಹಕರಿಗೆ ಪ್ರತಿದಿನಕ್ಕೆ ರೂ 3000 ಪರಿಹಾರ ನೀಡಲಾಗುತ್ತದೆ ಎಂದು ಮಹೀಂದ್ರ ಟ್ರಕ್ಸ್, ಬಸ್ ಮತ್ತು ನಿರ್ಮಾಣ ಉಪಕರಣಗಳ ವಿಭಾಗದ ಬ್ಯುಸಿನೆಸ್ ಮುಖ್ಯಸ್ಥ ಡಾ. ವೆಂಕಟ್ ಶ್ರೀನಿವಾಸ್ ತಿಳಿಸಿದ್ದಾರೆ.

