ಮೂಡಿಗೆರೆ : ಮಾ.06 ರಂದು ’17ನೇ ವರ್ಷದ ತುಳು ವೈಭವೊ-2026′ ಎಂಬ ಅದ್ದೂರಿ ಕಾರ್ಯಕ್ರಮ

0
56

ದಿನಾಂಕ 06-03-2026 ನೇ ಶುಕ್ರವಾರ ಡಾ|| ಪಿ.ಎ.ಅಡ್ಯಂತಾರು ರಂಗಮಂದಿರ ಮತ್ತು ಫ್ರೆಂಡ್ಸ್‌ ಬ್ಯಾಂಡ್ಮಿಂಟನ್‌ ಕ್ರಿಡಾಂಗಣ ಮೂಡಿಗೆರೆಯಲ್ಲಿ , ಸುತ್ತಮುತ್ತಲಿನಲ್ಲಿ ನೆಲೆಸಿರುವ ಎಲ್ಲಾ ತುಳು ಬಾಂಧವರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಉದ್ದೇಶದಿಂದ ತುಳು ಕೂಟ ಮೂಡಿಗೆರೆ (ರಿ), 17ನೇ ವರ್ಷದ ತುಳು ವೈಭವೊ – 2026 ಎಂಬ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ.

ಸಭಾ ಕಾರ್ಯಕ್ರಮವು 5-00 ಗಂಟೆಗೆ ಪ್ರಾರಂಭವಾಲಿದ್ದು , ಸ್ಥಳೀಯ ಗಣ್ಯರು, ಸಂಸದರು, ಶಾಸಕರು, ಸಮಾಜ ಸೇವಕರು ಮತ್ತು ಗೌರವಾನ್ವಿತ ಅತಿಥಿಗಳು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು.

ಸಾಂಸ್ಕೃತಿಕ ಕಾರ್ಯಕ್ರಮವು ರಾತ್ರಿ 8-00 ಗಂಟೆಗೆ ಪ್ರಾರಂಭವಾಗಲಿದೆ. ಅಮ್ಮ ಕಲಾವಿದೆರ್‌ ಕುಡ್ಲ ಅಭಿನಯಿಸುವ ಶಿವಾನಂದ ಶೆಟ್ಟ ಮಂಗಲ್ಪಾಡಿ ಸಾರಥ್ಯದಲ್ಲಿ ‘ತುಳುನಾಡ ಕಲಾ ಸಿಂದೂರʼ ಸೋಮನಾಥ ಶೆಟ್ಟಿ ಮಂಗಲ್ಪಾಡಿ ರಚಿಸಿ , ‘ತುಳುನಾಡ ಕಲಾಬಿರ್ಸೆ’ ದೀಪಕ್ ರೈ ಪಾಣಾಜೆ ಹಾಗೂ “ಕಾಮಿಡಿ ಕಿಲಾಡಿ ಖ್ಯಾತಿಯʼ ಪಿಂಕಿರಾಣಿ ಅಭಿನಯದಲ್ಲಿ “ರಂಗ್‌ದ ರಾಜೆ” ಸುಂದರ್‌ ರೈ ಮಂದಾರ ನಿರ್ದೇಶಿಸಿ ಅಭಿನಯಿಸುವ “ಆನ್‌ ಮಗೆ” ಎಂಬ ತುಳು ಹಾಸ್ಯಮಯ ನಾಟಕ ಜರುಗಲಿದೆ.


LEAVE A REPLY

Please enter your comment!
Please enter your name here