ಮುದ್ರಾಡಿ : ಶ್ರೀ ಮಂಜುನಾಥೇಶ್ವರ ನೂತನ ಸ್ವಸಹಾಯ ಸಂಘದ ಉದ್ಘಾಟನೆ

0
32

ಧರ್ಮಸ್ಥಳ ಯೋಜನೆಯಿಂದ ಬಡವರ ಏಳಿಗೆ : ಲೀಲಾವತಿ

ಮುದ್ರಾಡಿ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜನತೆಗೆ ಸಾಕಷ್ಟು ಪ್ರಯೋಜನಗಳಾಗಿವೆ, ಊರಿನ ಅಭಿವೃದ್ಧಿಯಾಗಿದೆ, ಧರ್ಮಾಧಿಕಾರಿಗಳು ಸಾಕಾರಗೊಳಿಸಿದ ನೂರಾರು ಜನೋಪಯೋಗಿ ಯೋಜನೆಗಳಿಂದ ಜನರ ಬದುಕು ಹಸನಾಗಿದೆ, ಬಡವರ ಬದುಕು ಕಲ್ಯಾಣವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೆಬ್ರಿ ತಾಲ್ಲೂಕು ಯೋಜನಾಧಿಕಾರಿ ಲೀಲಾವತಿ ಹೇಳಿದರು.
ಅವರು ಮುದ್ರಾಡಿ ಬಲ್ಲಾಡಿ ವಲಯದಲ್ಲಿ ಸೋಮವಾರ ಉದ್ಘಾಟನೆಗೊಂಡ ಶ್ರೀ ಮಂಜುನಾಥೇಶ್ವರ ನೂತನ ಸ್ವಸಹಾಯ ಸಂಘಕ್ಕೆ ಸಂಘದ ದಾಖಲೆಗಳು ಮತ್ತು ಕಾರ್ಯ ವೈಖರಿಗಳ ಮಾಹಿತಿಯನ್ನು ಹಸ್ತಾಂತರ ಮಾಡಿ ಮಾತನಾಡಿದರು.
ಮುದ್ರಾಡಿ ಸುಕುಮಾರ್‌ ಪೂಜಾರಿಯವರ ನೇತ್ರತ್ವದಲ್ಲಿ ಅತ್ಯಂತ ನಿಷ್ಠೆಯಿಂದ ಸಂಘವನ್ನು ರಚಿಸಲಸಗಿದೆ, ಮುಂದೆ ಶ್ರೀ ಮಂಜುನಾಥೇಶ್ವರ ನೂತನ ಸ್ವಸಹಾಯ ಸಂಘವು ಮಾದರಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಶುಭಹಾರೈಸಿದರು. ಮುದ್ರಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ವಸಂತಿ ಪೂಜಾರಿ ನೂತನ ಸಂಘಕ್ಕೆ ಶುಭಹಾರೈಸಿದರು. ಸುಕುಮಾರ ಪೂಜಾರಿ ಮುದ್ರಾಡಿ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಯೋಜನೆಯ ವಲಯಾಧ್ಯಕ್ಷರಾದ ಯೋಗೇಶ್, ಪ್ರಮುಖರಾದ ಮುದ್ದಣ್ಣ ಪೂಜಾರಿ, ಸಂತೋಷ ಪೂಜಾರಿ, ಸುಕುಮಾರ ಪೂಜಾರಿ, ಪತ್ರಕರ್ತರಾದ ಸುಕುಮಾರ್ ಮುನಿಯಾಲ್, ಬಾಲಚಂದ್ರ ಮುದ್ರಾಡಿ, ನೂತನ ಸಂಘದ ಪದಾಧಿಕಾರಿಗಳಾದ ಜಗದೀಶ್ ಆಚಾರ್ಯ, ಹಿರಿಯರಾದ ಗೋಪಾಲ ಆಚಾರ್ಯ, ಭೋಜ ಪೂಜಾರಿ, ಮೇಲ್ವಿಚಾರಕ ಉಮೇಶ್‌ ಬಿಕೆ, ಸೇವಾಪ್ರತಿನಿಧಿ ಮಮತಾ, ಒಕ್ಕೂಟದವರು, ಸಂಘದವರು ಉಪಸ್ಥಿತರಿದ್ದರು. ಉಮೇಶ್‌ ಬಿ.ಕೆ.ಸ್ವಾಗತಿಸಿ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here