ಹೆಬ್ರಿ : ಮುದ್ರಾಡಿ ಗ್ರಾಮ ಪಂಚಾಯತ್ ವತಿಯಿಂದ, ಗ್ರಾಮದ ಸುಬ್ಬಣ್ಣಕಟ್ಟೆ ಅತಿಥಿ ಮನೆ ಬಳಿಯಿಂದ ಎರ್ಡೂರು ಮಠದವರೆಗಿನ ದಾರಿ ದೀಪಗಳನ್ನು ಎಂ.ಆನಂದ ಭಟ್ ಮತ್ತು ಜರುವತ್ತು ಮತ್ತು ಕಾನ್ಗುಂಡಿ ರಸ್ತೆ ಬದಿ ಅಳವಡಿಸಿದ ಬೀದಿ ದೀಪಗಳನ್ನು ಸುಂದರ ಪೂಜಾರಿಯವರು ಸ್ವಿಚ್ ಒತ್ತಿ ಉರಿಸುವ ಮೂಲಕ 07.09.2025 ರಂದು ಉದ್ಘಾಟಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ ಪೂಜಾರಿಯವರು ಸಭೆಯ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷರಾದ ರಮ್ಯಾಕಾಂತಿ, ಪಂಚಾಯತ್ ಸದಸ್ಯರಾದ ಸನತ್ ಕುಮಾರ್,ಶಾಂತಾ ಪೂಜಾರಿ, ಸಂತೋಷ್ ಕುಮಾರ್ ಶೆಟ್ಟಿ, ಗಣಪತಿ ಎಂ ಹಾಗೂ ಗಣಪತಿ ಪೈ,ಗೋವಿಂದ ಜೋಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಸ್ ಟಿ ಶೆಟ್ಟಿಗಾರ್, ಶೇಖರ್ ಹೆಗ್ಡೆ, ಜಯಾನಂದ ಕಾಮತ್, ಉಮೇಶ್ ಪೈ, ಭೋಜ ಪೂಜಾರಿ ಮತ್ತು ಇತರ ಸ್ಥಳೀಯರು ಈ ಕಾರ್ಯಕ್ರಮದಲ್ಲಿ ಭಾಗ ವಹಿಸಿದರು,ಮೆಸ್ಕಾಂ ಸಿಬ್ಬಂದಿ ಹಾಜರಿದ್ದರು, ಎಂ ಪ್ರಶಾಂತ್ ಪೈ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಜನ ಪ್ರತಿನಿಧಿಗಳ ಜನಸೇವೆ ಯನ್ನು ಗುರುತಿಸಿ ಗೌರವಿಸಲಾಯಿತು.