ಮುದ್ರಾಡಿ: ಅರ್ಧನಾರೀಶ್ವರ ಅಬ್ಬಗ ದಾರಗ ದೇವಸ್ಥಾನ ಮತ್ತು ಬ್ರಹ್ಮ ಬೈದರ್ಕಳ ಗರಡಿ ಬಲ್ಲಾಡಿ ಮುದ್ರಾಡಿ ಇದರ ಜೀರ್ಣೋದ್ದಾರದ ಪ್ರಯುಕ್ತ ಪ್ರಾಯಶ್ಚಿತ್ತಾದಿ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು.
ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶುಭದರ ಶೆಟ್ಟಿ ಹಲವಾರು ವರ್ಷಗಳಿಂದ ನಡೆಸಬೇಕೆಂದುಕೊಂಡಿದ್ದ ದೇವಸ್ಥಾನದ ಜೀರ್ಣೋದ್ದಾರದ ಕಾರ್ಯಕ್ಕೆ ಈಗ ಸಮಯ ಒದಗಿ ಬಂದಿದ್ದು ಆ ಪ್ರಯುಕ್ತ ಪ್ರಾಯಶ್ಚಿತ್ತಾದಿ ಕಾರ್ಯಕ್ರಮಕ್ಕೆ ದಿನ ನಿಗದಿಪಡಿಸಲಾಗಿದ್ದು ಪ್ರತಿಯೊಬ್ಬರು ಬಂದು ಸಹಕರಿಸಬೇಕು ಮತ್ತು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಜೀರ್ಣೋದ್ದಾರದ ಕೆಲಸ ಸುಸೂತ್ರವಾಗಿ ನಡೆಯಲು ಸಾಧ್ಯ,ಆದ್ದರಿಂದ ಎಲ್ಲರೂ ದೇವಸ್ಥಾನ ಹಾಗೂ ಗರಡಿಯ ಜೀರ್ಣೋದ್ದಾರದ ಕಾರ್ಯದಲ್ಲಿ ತಮ್ಮನ್ನು ಸಾಧ್ಯವಾದಷ್ಟು ತೊಡಗಿಸಿಕೊಂಡು ಸಹಕರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗರಡಿಯ ಮುಕ್ಕಾಲು ಶೆಟ್ರು ಜಯಕರ ಶೆಟ್ಟಿ, ಗುರುಪ್ರಸಾದ್ ಹೆಗ್ಡೆ ಕೊಳಂಬೆ, ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಸಂತಿ ಪೂಜಾರ್ತಿ, ದೇವಸ್ಥಾನದ ಅರ್ಚಕರಾದ ಕೃಷ್ಣಪ್ರಸಾದ್ ಭಟ್, ಗರಡಿಯ ಅರ್ಚಕರಾದ ಸಂತೋಷ್ ಪೂಜಾರಿ, ಮುದ್ದು ಪೂಜಾರಿ, ಬೆಳಗುಂಡಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಸತೀಶ್ ಸೇರಿಗಾರ್, ವಿಜಯ್ ಹೆಗ್ಡೆ ಕೊಳಂಬೆ ಹಾಗೂ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರು, ಜೀರ್ಣೋದ್ದಾರದ ಸಮಿತಿಯ ಸದಸ್ಯರು,ದೇವಸ್ಥಾನದ ಅರ್ಚಕವೃಂದ, ಗರಡಿಯ ಅರ್ಚಕವೃಂದ ಮತ್ತು ಊರ ಗ್ರಾಮಸ್ಥರು ಉಪಸ್ಥಿತರಿದ್ದರು.