ಹೆಬ್ರಿ : ರಾಜ್ಯದ ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಅವರ ತಾಯಿ ಕಮಲ ಪೂಜಾರಿ ( 88) ವರ್ಷ ಅವರು ಶುಕ್ರವಾರ ರಾತ್ರಿ 9.40 ಹೊತ್ತಿಗೆ ಅಸೌಖ್ಯದ ಸ್ವಗೃಹದಲ್ಲಿ ನಿಧನರಾದರು. ಮಂಡಲ ಪಂಚಾಯಿತಿ ಸದಸ್ಯರಾಗಿದ್ದ ದಿವಂಗತ ಚಂದು ಪೂಜಾರಿಯವರ ಧರ್ಮಪತ್ನಿಯಾಗಿದ್ದ ಕಮಲ ಪೂಜಾರಿ ಮುದ್ರಾಡಿ ಗ್ರಾಮ ಪಂಚಾಯತ್ ಸದಸ್ಯೆಯಾಗಿಯು ಸೇವೆ ಸಲ್ಲಿಸಿದ್ದರು. ಮುದ್ರಾಡಿಯ ಪರಿಸರದಲ್ಲಿ ಕಮಲ ಪೂಜಾರಿ ಅತ್ಯಂತ ಜನಾನುರಾಗಿಯಾಗಿದ್ದರು. ಕಮಲ ಪೂಜಾರಿ ಅವರಿಗೆ ಮುದ್ರಾಡಿ ಮಂಜುನಾಥ ಪೂಜಾರಿ ಸೇರಿದಂತೆ 4 ಗಂಡು ಮಕ್ಕಳು ಮತ್ತು 4ಮಂದಿ ಹೆಣ್ಣು ಮಕ್ಕಳಿದ್ದಾರೆ. ಮೊಮ್ಮಕ್ಕಳು ಸೇರಿ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.
ಇಂದು 2ಗಂಟೆಗೆ ಅಂತ್ಯ ಕ್ರಿಯೆ
ಕಮಲ ಪೂಜಾರಿಯವರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ 2 ಗಂಟೆಗೆ ಸ್ವಗೃಹದ ಪರಿಸರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

