ಮುದ್ರಾಡಿ: 6ನೇ ವರ್ಷದ ಶಾರದೋತ್ಸವ ಮುದ್ರಾಡಿಯ ಗ್ರಾಮೋತ್ಸವವಾಗಿ ಮೂಡಿಬಂದಿದೆ. ಸರ್ವರ ಸಹಕಾರ, ಸಮಿತಿಯ ಪದಾಧಿಕಾರಿಗಳ ಶ್ರಮವೇ ಇದಕ್ಕೆ ಕಾರಣ, ಸಮಾಜಮುಖಿ ಚಟುವಟಿಕೆ ಗಳಿಗೆ ಸದಾ ಒತ್ತು ನೀಡುತ್ತಾ ಜನರ ಸೇವೆಯಲ್ಲಿ ಸದಾ ತೊಡಗಿಸಿಕೊಳ್ಳುವ ಜತೆಗೆ. ರಾಜ್ಯ ಸರಕಾರ ಸೇವೆಯನ್ನು ಗುರುತಿಸಿ ನಾರಾಯಣಗುರು ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷನಾಗಿ ಜವಾಬ್ದಾರಿ ನೀಡಿದ್ದು ಈ ಗೌರವವನ್ನು ಮುದ್ರಾಡಿ ಜನತೆಗೆ ಅರ್ಪಿಸುತ್ತೇನೆ ಎಂದು ಮುದ್ರಾಡಿ ಸಾರ್ವಜನಿಕ ಶಾರದೋತ್ಸವ ಸಮಿತಿ ಅಧ್ಯಕ್ಷರಾದ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.
ಅವರು ಮುದ್ರಾಡಿಯಲ್ಲಿ ನಡೆದ 6ನೇ ವರ್ಷದ ಮುದ್ರಾಡಿ ಶಾರದೋತ್ಸವ ಯಶಸ್ವಿಗಾಗಿ ದುಡಿದವರಿಗೆ ಕೃತಜ್ಞತೆ ಸಲ್ಲಿಸಿ ಸಮಿತಿಯ ಪದಾಧಿಕಾರಿಗಳ ವತಿಯಿಂದ ನಡೆದ ಸಮ್ಮಾನ ಸ್ವೀಕರಿಸಿ ಮಾತನಾಡಿದರು. ಸಮಿತಿಯ ಉಪಾಧ್ಯಕ್ಷರಾದ ಚಂದ್ರಶೇಖರ ಬಾಯರಿ, ಗೌರವ ಸಲಹೆಗಾರರಾದ ವೆಂಕಟರಮಣ ಕಲ್ಕೂರ್, ಶಶಿಕಲಾ ಡಿ. ಪೂಜಾರಿ, ಸಮಿತಿ ಸಂಚಾಲಕರಾದ ಸತೀಶ್ ಸೇರಿಗಾರ ಬೆಳಗುಂಡಿ, ಸಂತೋಷ್ ಪೂಜಾರಿ ನೆಕ್ಕರ್‌ಪಲೈಸನತ್ ಕುಮಾರ್‌ಮುದ್ರಾಡಿ, ರಾಘವೇಂದ್ರ ಪೂಜಾರಿ ನೆಲ್ಲಿಕಟ್ಟೆ ಪದ್ಮನಾಭಕುಲಾಲ್, ಜತೆ ಕಾರ್ಯದರ್ಶಿ ಅಣ್ಣಪ್ಪ ಮುದ್ರಾಡಿ, ಕಾರ್ಯದರ್ಶಿ ವಿಶು ಕುಮಾರ್ ಉಪ್ಪಳ, ಡಾ| ಪ್ರದೀಪ್ ರಾವ್ ಉಡುಪಿ, ಶ್ರೀಕಾಂತ್ ಪೂಜಾರಿ ಕುಚೂರು, ಸದಸ್ಯರುಗಳಾದ ಶಿವರಾಮ ಉಜೂರು, ವಿನಾಯಕ ಬಲ್ಲಾಡಿ, ಮಹೇಶ್ ಕಾನ್ಸುಂಡಿ, ನಿತ್ಯಾನಂದ ಶೆಟ್ಟಿಗಾರ್, ಯತೀಶ್ ಪೂಜಾರಿ,ಸುನಿಲ್ ಸಮೃದ್ವಿಕೃಷ್ಣ ಶೆಟ್ಟಿಗಾರ್‌ಮುದ್ರಾಡಿ, ರಾಘವೇಂದ್ರ ಪೂಜಾರಿ ತುರ್ಕರಬೆಟ್ಟು ರವಿ ಪೂಜಾರಿ ಪಾದೆಮನೆ, ಸುರೇಶ್ ಶೆಟ್ಟಿಗಾರ್ ಮದಗ, ಜ್ಯೋತಿ ಎಂ. ಪೂಜಾರಿ, ಆದರ್ಶ್ ಎಂ. ಪೂಜಾರಿ, ಸುರೇಶ್ ಶೆಟ್ಟಿಗಾರ್ ಉಪ್ಪಳ, ಉಪಸ್ಥಿತರಿದ್ದರು. ಶಿಕ್ಷಕ ಪ್ರಕಾಶ್ ಪೂಜಾರಿ ಮಾತಿಬೆಟ್ಟು ಸ್ವಾಗತಿಸಿದರು. ಕೋಶಾಧಿಕಾರಿ ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿ, ಗೌರವ ಸಲಹೆಗಾರ ಸಂತೋಷ್ ಕುಮಾರ್‌ಶೆಟ್ಟಿ ವಂದಿಸಿದರು.