ಹೆಬ್ರಿ: ತಾಲೂಕಿನ ಮುದ್ರಾಡಿ ಶ್ರೀ ಅರ್ಧನಾರೀಶ್ವರ ಅಬ್ಬಗ ದಾರಗ ದೇವಸ್ಥಾನ ಮತ್ತು ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಜೀರ್ಣೋದ್ಧಾರದ ಪ್ರಯುಕ್ತ ಪ್ರಾಯಶ್ಚಿತ್ತಾದಿ ಕಾರ್ಯಕ್ರಮವು ಜು. 31ರಿಂದ ಆ. 3ರವರೆಗೆ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ದೋಷಗಳ ಪರಿಹಾರಕ್ಕಾಗಿ ಕ್ಷೇತ್ರದ ತಂತ್ರಿಗಳಾದ ವೇ.ಮೂ. ವಿದ್ವಾನ್ ರಾಮಚಂದ್ರ ಭಟ್ ಅವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆಯಲಿದೆ. ಜು. 31ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆಯೊಂದಿಗೆ ಆರಂಭಗೊಂಡು, ಮುಷ್ಟಿ ಕಾಣಿಕೆ ಮತ್ತು ಗರಡಿಯಲ್ಲಿ ಹಗಲು ಪನಿವಾರ ಸೇವೆ, ಪೂರ್ವಾಹ್ನ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಪಂಚದುರ್ಗಾನಮಸ್ಕಾರ, ಆ. 1 ರಂದು ಬೆಳಿಗ್ಗೆ ಮೃತ್ಯುಂಜಯ ಯಾಗ, ಸಂಜೆ ಸುದರ್ಶನ ಯಾಗ, ವನದುರ್ಗ ಯಾಗ, ಅಘೋರ ಯಾಗ, ದೇವಸ್ಥಾನದಲ್ಲಿ ವಾಸ್ತುಯಾಗ ಪೂಜೆ, ಗರಡಿಯಲ್ಲಿ ವಾಸ್ತುಪೂಜೆ ಜರಗಲಿದೆ. ಆ. 2ರಂದು ಬೆಳಿಗ್ಗೆ ಆಯುತ ಸಂಖ್ಯೆ ತಿಲಯಾಗ ಹಾಗೂ ವಿವಿಧ ವೈದಿಕ ಪೂಜಾಧಿಗಳು, ಆ. 3ರಂದು ಬೆಳಿಗ್ಗೆ ಶ್ರೀ ದೇವರಿಗೆ ಮತ್ತು ಗರಡಿಯಲ್ಲಿ ನವಕ ಪ್ರಧಾನಹೋಮ, ಕಲಶಾಭಿಷೇಕ, ಮಹಾಪೂಜೆ ನಡೆಯಲಿದೆ.