ಹೆಬ್ರಿ : ಹೆಬ್ರಿಯ ಮುದ್ರಾಡಿ ಕಾರ್ಪೋರೇಶನ್ ಬ್ಯಾಂಕ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿ ಬ್ಯಾಂಕಿನ ವಿವಿಧ ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ ಬ್ಯಾಂಕಿಗಳ ವಿಲೀನ ಬಳಿಕ ಪ್ರಸ್ತುತ ಯೂನಿಯನ್ ಬ್ಯಾಂಕ್ ಮುಂಬಯಿ ಸೆಂಟ್ರಲ್ ಕಚೇರಿಯ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿರುವ ತೀರ್ಥಹಳ್ಳಿ ಮೂಲದ ಡಾ. ಎಚ್.ಟಿ.ವಾಸಪ್ಪ ಅವರನ್ನು ಮುದ್ರಾಡಿಯಲ್ಲಿ ಇತ್ತೀಚೆಗೆ ಶ್ರೀಗುರುರಕ್ಷಾ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕರಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮುದ್ರಾಡಿ ಮಂಜುನಾಥ ಪೂಜಾರಿ ಸನ್ಮಾನಿಸಿದರು. ಆದರ್ಶ ಮಂಜುನಾಥ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.