ಮುಗ್ಡಾಲ್ ಗುಡ್ಡೆ: ‘5ನೇ ವರ್ಷದ ಆಟಿಡೊಂಜಿ ದಿನ’ಆಟಿದ ಅಟ್ಟನೆ’

0
41

ಬಂಟ್ವಾಳ: ‘ನಮ್ಮ ವಠಾರ ಮುಗ್ಡಾಲ್ ಗುಡ್ಡೆ’ ವತಿಯಿಂದ 5 ನೇ ವರ್ಷದ’ಆಟಿಡೊಂಜಿ ದಿನ ಕಾರ್ಯಕ್ರಮ”ಆಟಿದ ಅಟ್ಟನೆ “ವಿವಿಧ, ಸಂಸ್ಕೃತಿ ಸಂಸ್ಕಾರದ ಆಹಾರ ತಿಂಡಿ ತಿನಸಿನ ಜೊತೆ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಾಧನೆಯನ್ನು ಮಾಡಿದ ಸಾಧಕರಿಗೆ ಸನ್ಮಾನದೊಂದಿಗೆ ವಿಜೃಂಭನೆಯಿಂದ ಜರಗಿತು.
ಸ್ಥಳೀಯ ಹಿರಿಯರಜೊತೆ ವಠಾರದ ಮಾತೆಯರು ದೀಪ ಬೆಳಗಿಸಿ ಉದ್ಘಾಟಿಸಿದರು.

ತುಳುನಾಡಿನ ಸಾಂಸ್ಕೃತಿಕ ನೃತ್ಯಗಳು, ಆಟಿಕಳಂಜ ನಲಿಕೆ, ತುಳುಪದಕೊಲಿಕೆ ಆಟ, ಕಂಡಡೊಂಜಿ ದಿನ ಸ್ಪರ್ಧೆ ನಡೆಸಿದ ಸ್ಪರ್ಧಾಳುಗಳಿಗೆ ಬಹುಮಾನ ವಿತರಣೆ, ಹತ್ತನೇ ತರಗತಿಯಲ್ಲಿ ಉತ್ತಮ ಅಂಕ ಪಡದ ವಿದ್ಯಾರ್ಥಿಗಳನ್ನು ತುಳುನಾಡ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಆಟಿಯ ವಿಶೇಷತೆಗಳು ಮತ್ತು ವಠಾರದ ಈ ರೀತಿ ಸಮ್ಮಿಲನದ ಬಗ್ಗೆ ಯಶೋದಾ ಮಾತನಾಡಿದರು.ತದನಂತರ ತುಳುನಾಡಿನ ಆಟಿ ತಿಂಗಳ ತಿಂಡಿ ತಿನಿಸುಗಳನ್ನು ವಿತರಿಸಲಾಯಿತು.

‘ಆಟಿದ ಅಟ್ಟನೆ’ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ದಲ್ಲಿ ಸಮಾಜ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಲಾಲ್, ಅಕ್ಷಯ ಫ್ರೆಂಡ್ಸ್‌ನ, ಅಕ್ಷಯ ಕೇಟರ್ಸ್ ನ ಮಾಲಕರಾದ ಮಹಾಬಲ, ಅಶೋಕ್, ಬಂಟ್ವಾಳ ಪುರಸಭೆಯ ಸದಸ್ಯರಾದ ದೇವಕಿ, ಯಶೋದಾ, ಮತ್ತು ಶೋಭಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯಧಿಕಾ ಅಂಕ ಪಡೆದ ವಿದ್ಯಾರ್ಥಿಗಳಾದ ಕುಮಾರಿ ತನುಶ್ರೀ, ಕುಮಾರಿ ಡಿಶು ಮತ್ತು ಮಾಸ್ಟರ್ ಚರಿತ್ ರವರನ್ನು ಸನ್ಮಾನಿಸಲಾಯಿತು. ನಿರೂಪಕ ‘ಸ್ವರರತ್ನ’ ಮತ್ತು ಕರ್ನಾಟಕ ರಾಜ್ಯ ‘ಗುರುಶ್ರೇಷ್ಠ ‘ಬಿರುದಾಂಕಿತ ಎನ್ .ಕೆ. ಕುಲಾಲ್ ಬೇಕೂರು ಇವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು.

ನಿತ್ಯ, ಸಾನ್ವಿ, ತೃಶಾ ಮತ್ತು ಡಿಶು ಪ್ರಾರ್ಥಿಸಿ, ಎನ್.ಕೆ. ಕುಲಾಲ್ ಬೇಕೂರು ನಿರೂಪಿಸಿದರು. ವಿಜೇತ ಎನ್ ಕೆ ಕುಲಾಲ್ ಮತ್ತು ಹರ್ಷಿತಾ ಕುಲಾಲ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಗುರು ಮುಗ್ಡಾಲ್ ಗುಡ್ಡೆ, ತಿಲಕ್ ಮುಗ್ಡಾಲ್ ಗುಡ್ಡೆ, ಮತ್ತು ಉದಯ್ ಕಾರ್ಯಕ್ರಮವನ್ನು ಸಂಯೋಜಿಸಿದರು.

LEAVE A REPLY

Please enter your comment!
Please enter your name here